ಮುಡಿಪು: ಟಿಪ್ಪರ್-ಆಮ್ನಿ ಅಪಘಾತ: ಗಾಯಾಳು ಬಾಲಕ ಸಾವು

ಕಾರು ಚಾಲಕ ಸೇರಿ ಐವರು ಗಾಯಗೊಂಡ ಘಟನೆಯಲ್ಲಿ ತೀವೃ ಗಾಯಗೊಂಡಿದ್ದ ಬಾಲಕ ಮೊಹ್ಮದ್ ಮುಜಂಬಿಲ್ ಆಸ್ಪತ್ರೆಯಲ್ಲಿ ಸಾವಪ್ಪಿದ್ದಾನೆ.

ಮಂಗಳೂರು: ಮುಡಿಪು ಸಮೀಪ ಕಾಯೆರ್ ಗೋಳಿ ಎಂಬಲ್ಲಿ ಲಾರಿ ಮತ್ತು ಮಾರುತಿ ಒಮ್ನಿ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಕಾರು ಚಾಲಕ ಸೇರಿ ಐವರು ಗಾಯಗೊಂಡ ಘಟನೆಯಲ್ಲಿ ತೀವೃ ಗಾಯಗೊಂಡಿದ್ದ ಬಾಲಕ ಮೊಹ್ಮದ್ ಮುಜಂಬಿಲ್ ಆಸ್ಪತ್ರೆಯಲ್ಲಿ ಸಾವಪ್ಪಿದ್ದಾನೆ.

ಕಾರು ಚಾಲಕ ರೆಂಜಾಡಿ ಅಡ್ಕರೆ ಪಡ್ಪು ನಿವಾಸಿ ಕಮಲುದ್ದೀನ್(24) ಈ ಅಪಘಾತದಲ್ಲಿ ಸಾವಪ್ಪಿದ್ದರು. ಕಡಬದ ಮೊಯಿದೀನ್ ಅವರ ಮಗ ಮೊಹ್ಮದ್ ಮುಝಂಬಿಲ್ (10)ತೀವೃ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈತ ದೇರಳಕಟ್ಟೆ ಸರಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ.

ಖೈರುನ್ನೀಸಾ(32), ಕಾರು ಚಾಲಕ ಸಿಕಂದರ್(42), ಮಕ್ಕಳಾದ ಮೊಹಮದ್ ಮುನೈಝ್(4) ಮತ್ತು ಮಜಿನ್(2) ಈ ಅಪಘಾತದಲ್ಲಿ ಗಾಯಗೊಂಡಿದ್ದು, ಗಾಯಾಳುಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಇದೀಗ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

ದೇರಳಕಟ್ಟೆ ರೆಂಜಾಡಿಯ ಕುಟುಂಬ ಸದಸ್ಯರು ಉಪ್ಪಿನಂಗಡಿಯಲ್ಲಿ ಮಗುವಿನ ನಾಮಕರಣ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಮೆಲ್ಕಾರ್-ಮುಡಿಪು ಕಡೆಯಿಂದ ಮನೆಯತ್ತ ತೆರಳುತ್ತಿದ್ದಾಗ ಅತಿ ವೇಗದಿಂದ ಧಾವಿಸಿ ಬರುತ್ತಿದ್ದ ಟಿಪ್ಪರ್ ಲಾರಿ ಕಾರಿಗೆ ಗುದ್ದಿತ್ತು. ಅಪಘಾತದ ತೀವೃತೆಗೆ ಕಾರು ನಜ್ಜುಗುಜ್ಜಾಗಿತ್ತು.

Get real time updates directly on you device, subscribe now.