ಉಪ್ಪಳ ಅಪಘಾತ: ಗಾಯಾಳು ಮಗು ಮೃತ್ಯು

ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು

ಅಪಘಾತದಲ್ಲಿ ತೀವೃ ಗಾಯಗೊಂಡ ಮಗು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಖೇದಕರ ಘಟನೆ ವರದಿಯಾಗಿದೆ.

ಮಂಗಳೂರು: ರಾ.ಹೆ 66ರ ಉಪ್ಪಳ ಸಮೀಪ ನಯಾಬಝಾರ್ ಎಂಬಲ್ಲಿ ಲಾರಿ ಮತ್ತು ತೂಫಾನ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವೃ ಗಾಯಗೊಂಡ ಮಗು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಖೇದಕರ ಘಟನೆ ವರದಿಯಾಗಿದೆ.

ಇದೇ ಅಪಘಾತದಲ್ಲಿ ಮೃತರಾದ ನಸೀಮಾ ಎಂಬವರ ಪುತ್ರಿ, ಒಂದು ವರ್ಷ ಆರು ತಿಂಗಳ ಹಸುಗೂಸು ಫಾತಿಮಾ ಮೃತಪಟ್ಟಿದ್ದಾಳೆ.

ಈ ಅಪಘಾತದಲ್ಲಿ ಐವರು ಮೃತಪಟ್ಟು, ಹನ್ನೆರಡು ಮಂದಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಹನ್ನೊಂದು ಮಕ್ಕಳನ್ನು ಆಸ್ಪತ್ರೆಗೆ ದಾಳಕಿಸಲಾಗಿದ್ದು, ನಿಧಾನವಾಗಿ ಚೇತರಿಕೆ ಕಂಡಿಬಂದಿದೆ.

ಸಚಿವ ಯು.ಟಿ. ಖಾದರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

Get real time updates directly on you device, subscribe now.