ಗೆಳೆಯರ ಜಗಳ ಓರ್ವನ ಬರ್ಬರ ಕೊಲೆಯಲ್ಲಿ ಅಂತ್ಯ

ಗೆಳೆಯರ ಜಗಳ ಓರ್ವನ ಬರ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ವರದಿಯಾಗಿದೆ.

ದಾವಣಗೆರೆ: ಗೆಳೆಯರ ಜಗಳ ಓರ್ವನ ಬರ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ವರದಿಯಾಗಿದೆ. ನಗರದ ಪಿಬಿ ರಸ್ತೆಯ ಬಾರ್ ಬಳಿ ಘಟನೆ ನಡೆದಿದ್ದು, ಮೃತರನ್ನು ವಿನೋಬನಗರದ ಭರತ್(25) ಎಂದು ಗುರುತಿಸಲಾಗಿದೆ.

ಗೆಳೆಯರ ನಡುವೆ ನಡೆದ ಗಲಾಟೆ ಸಂದರ್ಭ ತಲೆ ಮೇಲೆ ಕಲ್ಲು ಎತ್ತಿ ಹಾಕಿ ತಮ್ಮ ಪುತ್ರನ ಕೊಲೆಗೈಯಲಾಗಿದೆ ಎಂದು ಮೃತನ ಪೋಷಕರು ಪೊಲೀಸ್ ದೂರು ನೀಡಿದ್ದಾರೆ.

ದಾವಣಗೆರೆ ಎಸ್ಪಿ ಆರ್. ಚೇತನ್, ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Get real time updates directly on you device, subscribe now.