ಅಪ್ರಾಪ್ತ ವಯಸ್ಸಿನ ಸಹೋದರಿಯರ ನಿರಂತರ ಅತ್ಯಾಚಾರ: ಯುವಕರಿಬ್ಬರ ಬಂಧನ

ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರಗೈದಿರುವ ಪ್ರಕರಣ

ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರಗೈದಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯಲ್ಲಿ ಸಂಭವಿಸಿದ್ದು ವೇಣೂರು ಪೋಲೀಸರು ಆರೋಪಿಗಳ ವಿರುದ್ದ ಅತ್ಯಾಚಾರ ಹಾಗೂ ಫೋಕ್ಸೋ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾಗಿರುವ ಮಾಳ ನಿವಾಸಿ ಶರತ್ (21) ಹಾಗೂ ಸುಲ್ಕೇರಿ ನಿವಾಸಿ ಪ್ರಕಾಶ್ (23) ಎಂಬವರನ್ನು ವೇಣೂರು ಪೋಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು 15 ದಿನಗಳ ನ್ಯಾಂಗ ಬಂಧನ ವಿಧಿಸಿದೆ.

ಈದು ಗ್ರಾಮದ ನಿವಾಸಿಗಳಾಗಿರುವ 17ರ ಹಾಗೂ 15 ರ ಹರೆಯದ ಸಹೋದರಿಯರು ಸುಲ್ಕೇರಿಯಲ್ಲಿರುವ ಚಿಕ್ಕಪ್ಪನ ಮನೆಯಲ್ಲಿ ನಿಂತು ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ದೂರದ ಸಂಬಂಧಿಕರಾಗಿರುವ ಇಬ್ಬರು ಯುವಕರು ಸುಲ್ಕೇರಿಯ ಮನೆಗೆ ಬರುತ್ತಿದ್ದರು ಎನ್ನಲಾಗಿದೆ.

ಇವರು ಅಪ್ರಾಪ್ತ ಬಾಲಕಿಯರಲ್ಲಿ ತೀರಾ ಸಲುಗೆ ಬೆಳೆಸಿಕೊಂಡಿದ್ದಾರೆ ಹಾಗೂ ಯುವಕರು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಈ ಯುವತಿಯರನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಸಹೋದರಿಯವರ ತಂದೆ ಅಜ್ಜಿ ಮನೆಗೆ ಬಂದಾಗ ಪುತ್ರಿಯರು ಮನೆಯಲ್ಲಿ ಇರಲಿಲ್ಲ. ಸಂಶಯಗೊಂಡು ವಿಚಾರಿಸಿದಾಗ ಅವರಿಗೆ ದೂರದ ಸಂಬಂಧಿ ಯುವಕರೊಂದಿಗೆ ಪ್ರೇಮಸಂಬಂಧ ಬೆಳೆದಿರುವುದು ಗೊತ್ತಾಗಿದೆ. ಅವರು ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೋಲೀಸರು ಬಾಲಕಿಯರನ್ನು ಕರೆಸಿಕೊಂಡು ಮಾಹಿತಿ ಪಡೆದು ಬಳಿಕ ಇವರನ್ನು ಆರೋಗ್ಯ ತಪಾಸಣೆ ನಡೆಸಿದಾಗ ಅತ್ಯಾಚಾರ ನಡೆದಿರುವುದುಬೆಳಕಿಗೆ ಬಂದಿದೆ. ತಂದೆ ನೀಡಿರುವ ದೂರಿನಂತೆ ಪೊಲೀಸರು ಅತ್ಯಾಚಾರ ಹಾಗೂ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.
ದೈಹಿಕ ಹಲ್ಲೆಗೊಳಗಾದವರಲ್ಲಿ 17 ರ ಬಾಲಕಿ ಗರ್ಭಿಣಿಯಾಗಿರುವುದಾಗಿಯೂ ತಿಳಿದು ಬಂದಿದೆ. ಸಹೋದರಿಯನ್ನು ಚೈಲ್ಡ್‍ಲೈನ್ ವಶಕ್ಕೆ ಒಪ್ಪಿಸಲಾಗಿದೆ.

Get real time updates directly on you device, subscribe now.