ಮುಖ್ಯಮಂತ್ರಿಯಾಗಿದ್ದಕ್ಕೆ ನನಗೆ ಸಂತೋಷವಾಗಿಲ್ಲ: ಸನ್ಮಾನ ಮಾಡಬೇಡಿ ಎಂದು ಕಣ್ಣೀರಿಟ್ಟ ಕುಮಾರಸ್ವಾಮಿ

ನಾನು ಮುಖ್ಯಮಂತ್ರಿಯಾಗಿದ್ದೇನೆ, ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರಲ್ಲಿ ಸಂತೋಷವಿದೆ, ಆದರೆ ನಾನು ಸಂತೋಷವಾಗಿಲ್ಲ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದೇನೆ, ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರಲ್ಲಿ ಸಂತೋಷವಿದೆ, ಆದರೆ ನಾನು ಸಂತೋಷವಾಗಿಲ್ಲ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ ಕುಮಾರಸ್ವಾಮಿ ರಾಜ್ಯದ ಜನತೆ ನನಗೆ ಬಹುಮತ ಕೊಟ್ಟು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ, ನಾನು ಹೋದಕಡೆ ಜನ ಸೇರುತ್ತಾರೆ, ಸಂತೋಷ ಪಡ್ತಾರೆ, ಆದರೆ ದೌರ್ಭಾಗ್ಯವೆಂದರೆ ಅವರು ನಮ್ಮ ಪಕ್ಷಕ್ಕೆ ಮತ ನೀಡುವುದಿಲ್ಲ ಈ ಬಗ್ಗೆ ನನಗೆ ನೋವಿದೆ ಎಂದು ಸನ್ಮಾನ ಸಭೆಯಲ್ಲಿ ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.

ನಾನು ಪೂರ್ಣ ಬಹುಮತ ದೊರೆತು ಸಿಎಂ ಆಗಿಲ್ಲ, ಸಧ್ಯಕ್ಕೆ ಸನ್ಮಾನ ಸ್ವೀಕರಿಸುವಂತೆ ಬಲವಂತ ಮಾಡಬೇಡಿ ಎಂದು ಕುಮಾರಸ್ವಾಮಿ ಸನ್ಮಾನವನ್ನು ನಿರಾಕರಿಸಿದ್ದಾರೆ.

ಇದೇ ವೇಳೆ ಮಾತನಾಡಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ರೈತರ ಸಾಲ ಮನ್ನಾಪೈಕಿ ಈ ಹಿಂದಿನ ಸರ್ಕಾರ ಬಿಟ್ಟು ಹೋಗಿರುವ 4000 ಕೋಟಿ ರೂಪಾಯಿ ಸಾಲ ತೀರಿಸುವ ಹೊಣೆಗಾರಿಕೆ ಸಿಎಂ ಕುಮಾರಸ್ವಾಮಿ ಮೇಲಿದೆ. ಆರೋಗ್ಯವನ್ನೂ ಲೆಕ್ಕಿಸದೇ ಕುಮಾರಸ್ವಾಮಿ 18 ಗಂಟೆ ಕೆಲಸ ಮಾಡ್ತಾರೆ, ಅವರ ಆರೋಗ್ಯದ ಬಗ್ಗೆ ನನಗೆ ಆತಂಕ ಇದೆ ಎಂದು ಹೇಳಿದ್ದಾರೆ.

Get real time updates directly on you device, subscribe now.