ವಿವಾಹಿತ ಮಹಿಳೆಗೆ ನಿರಂತರ ಕಿರುಕುಳ: ಉಡುಪಿ ಜಿಲ್ಲಾ ಕರವೇ ಗೌರವಾಧ್ಯಕ್ಷನ ಬಂಧನ
ತನ್ನೊಂದಿಗೆ ಬರುವಂತೆ ನಿತ್ಯವೂ ಕಿರುಕುಳ ನೀಡುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಎನ್ನಲಾದ ವ್ಯಕ್ತಿಯೋರ್ವ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಉಡುಪಿ: ತನ್ನೊಂದಿಗೆ ಬರುವಂತೆ ನಿತ್ಯವೂ ಕಿರುಕುಳ ನೀಡುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಎನ್ನಲಾದ ವ್ಯಕ್ತಿಯೋರ್ವ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಉಡುಪಿ ಜಿಲ್ಲಾ ಕರವೇ ಗೌರವಾಧ್ಯಕ್ಷ ಉಡುಪಿ ತಾಲೂಕು ಶಿರ್ವ ಗ್ರಾಮದ ಪಂಜಿಮಾರಿನ ಸಂತೋಷ್ ಶೆಟ್ಟಿ ಎಂಬಾತನನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಪಂಜಿಮಾರಿನಲ್ಲಿ ಫ್ಯಾನ್ಸಿ ಸ್ಟೋರ್ ನಡೆಸುತ್ತಿರುವ ಮಹಿಳೆಯೋರ್ವರಿಂದ ಈತ ಮೊಬೈಲ್ ಸಂಖ್ಯೆ ಪಡೆದಿದ್ದ. ಆಗಾಗ ಆರೋಪಿ ಸಂತೋಷ ಶೆಟ್ಟಿ ಅಶ್ಲೀಲವಾಗಿ ಮಾತನಾಡಿ ತನ್ನೊಂದಿಗೆ ಬರುವಂತೆ ಪೀಡಿಸುತ್ತಿದ್ದ.
ಆರೋಪಿ ಸಂತೋಷ್ ಶೆಟ್ಟಿ ಆ ಮಹಿಳೆಗೆ ಕರೆ ಮಾಡಿ ಲಾಜ್‌ನಲ್ಲಿ ರೂಮ್ಮಾಡೋಣ ಎಂದೂ ಕರೆದಿದ್ದಾನೆ. ಇದರಿಂದ ರೋಸಿಹೋಗಿದ್ದ ಮಹಿಳೆ ತನ್ನ ಪತಿಗೆ ವಿಷಯ ತಿಳಿಸಿದ್ದು ಆರೋಪಿ ಸಂತೋಷನನ್ನು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬೀಳಿಸುವ ಪ್ಲಾನ್ ಮಾಡಿದ್ದಾರೆ.
ಮಹಿಳೆ ಆರೋಪಿ ಸಂತೋಷ್‌ಗೆ ಕರೆ ಮಾಡಿ ಹೋಟೆಲ್ ರೂಂಗೆ ಬರಲು ತಾನು ಸಿದ್ದ ಎಂದು ಸೂಚನೆ ನೀಡುವ ನಾಟಕವಾಡಿ ತನ್ನ ಫ್ಯಾನ್ಸಿ ಸ್ಟೋರ್ಗೆ ಕರೆಸಿಕೊಂಡಿದ್ದಾಳೆ. ಆ ವೇಳೆ ಅಲ್ಲಿದ್ದ ಮಹಿಳೆ ಮತ್ತು ಆಕೆಯ ಪತಿ ಈತನಿಗೆ ಗೂಸಾ ನೀಡಿ ಶಿರ್ವ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಶಿರ್ವ ಪೊಲೀಸರು ಇದೀಗ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಸಂತೋಷ್ ಶೆಟ್ಟಿಯನ್ನು ಬಂಧಿಸಿದ್ದಾರೆ.