ಕೊರೋನಾ ಕುರಿತು ಸುಳ್ಳು ಸುದ್ದಿ ಪೋಸ್ಟ್ ,ಇಬ್ಬರು ಯುವಕರ ಬಂಧನ

ಚಾಮರಾಜನಗರ ತಾಲೂಕಿನ ಕಾವುದವಾಡಿಯ ಲೋಕೇಶ್, ನಂಜನಗೂಡು ತಾಲೂಕಿನ ನೀಲಕಂಠ ಬಂಧಿತರು

ಒಬ್ಬ ಯುವಕ ಹಾಗೂ ಓರ್ವ ಯುವತಿಗೆ ಕೊರೋನಾ ಇದೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು.

ಕರಾವಳಿ ಕರ್ನಾಟಕ ವರದಿ
ಚಾಮರಾಜನಗರ: ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಮಾದ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಿದ್ದ ಇಬ್ಬರನ್ನು ಚಾಮರಾಜನಗರ ಜಿಲ್ಲೆ ಪೋಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಕಾವುದವಾಡಿಯ ಲೋಕೇಶ್, ನಂಜನಗೂಡು ತಾಲೂಕಿನ ನೀಲಕಂಠ ನಗರದ ನಾಗೇಂದ್ರ ಎಂಬುವವರನ್ನು ಬಂಧಿಸಲಾಗಿದೆ. ಇವರಿಬ್ಬರೂ ಒಬ್ಬ ಯುವಕ ಹಾಗೂ ಓರ್ವ ಯುವತಿಗೆ ಕೊರೋನಾ ಇದೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು.

ಗುಂಡ್ಲುಪೇಟೆ ತಾಲೂಕಿನ ಓರ್ವ ಯುವಕ ಹಾಗೂ ನಂಜನಗೂಡಿನ‌ ಓರ್ವ ಯುವತಿಗೆ ಕೊರೋನಾ ಸೋಂಕು ತಗುಲಿದೆ ಎಂದು ಸುದ್ದಿವಾಹಿನಿಯಲ್ಲಿ ತೋರಿಸಿದಂತೆ ಚಿತ್ರಗಳನ್ನು ರಚಿಸಿ ಪೋಸ್ಟ್ ಮಾಡಿದ್ದರು. ಇದನ್ನು ಸಾಕಷ್ಟು ಜನ ಹಂಚಿಕೊಂಡು ವೈರಲ್ ಮಾಡಿದ್ದರು.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಸಿ.ರವಿ ಅವರ ಸೂಚನೆಯ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಅವರುಗೆ ದೂರು ಸಲ್ಲಿಸಿದ ಕಾರಣ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ವೈಯುಕ್ತಿಕ ಕಾರಣಕ್ಕಾಗಿ ಆರೋಪಿಗಳು ಇಂತಹಾ ಸುಳ್ಳು ಸುದ್ದಿ ಹರಡಿದ್ದೇವೆ ಎಂದು ತನಿಖೆಯಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸಧ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ..

Get real time updates directly on you device, subscribe now.