ಗುಜರಾತ್ನಿಂದ ಶಾಕಿಂಗ್ ನ್ಯೂಸ್: 14 ತಿಂಗಳ ಬಾಲಕ ಕೊರೋನಾಗೆ ಬಲಿ
ಉತ್ತರ ಪ್ರದೇಶ ಮೂಲದ ಈ ಬಾಲಕನ ಹೆತ್ತವರು ಜಾಮ್ನಗರದಲ್ಲಿ ವಲಸೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಗುಜರಾತ್ನ ಜಾಮ್ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಕೋವಿಡ್-19 ಗೆ ಬಲಿಯಾಗಿದ್ದಾನೆ.
ಜಾಮ್ನಗರ್ (ಗುಜರಾತ್): ಗುಜರಾತ್ನ ಜಾಮ್ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಕೋವಿಡ್-19 ಗೆ ಬಲಿಯಾಗಿದ್ದಾನೆ. ಕೊರೋನಾ ವೈರಸ್ಗೆ ಪಾಸಿಟಿವ್ ಫಲಿತಾಂಶ ಬಂದ ಕಾರಣ ಬಾಲಕನನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ಅನಾರೋಗ್ಯಕ್ಕೆ ಈಡಾದ ಬಾಲಕನನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಆದರೆ ಮಂಗಳವಾರ ಬಾಲಕ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾನೆ.
ಉತ್ತರ ಪ್ರದೇಶ ಮೂಲದ ಈ ಬಾಲಕನ ಹೆತ್ತವರು ಜಾಮ್ನಗರದಲ್ಲಿ ವಲಸೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಬಾಲಕ ಅಥವಾ ತಂದೆ-ತಾಯಿಗೆ ಯಾವುದೇ ಪ್ರಯಾಣದ ಇತಿಹಾಸ ಇಲ್ಲ. ತಂದೆ-ತಾಯಿಯನ್ನು ಈಗ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು ಇವರಿಬರಲ್ಲೂ ಸೋಂಕಿನ ಲಕ್ಷಣಗಳು ಸದ್ಯಕ್ಕೆ ಕಂಡುಬಂದಿಲ್ಲ.
ಮಗುವಿನ ಹೆತ್ತವರು ವಾಸವಾಗಿದ್ದ ಪ್ರದೇಶವನ್ನು ಇದೀಗ ಸಂಪೂರ್ಣ ಸೀಲ್ ಮಾಡಲಾಗಿದ್ದು ವೈರಸ್ ಸೋಂಕು ತಡೆಗಟ್ಟಲು ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ.
ಗುಜರಾತ್ನಲ್ಲಿ ಈ ವರೆಗೆ 175 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು 16 ಜನರು ಮೃತಪಟ್ಟಿದ್ದಾರೆ.