ಬಾಲ್ಕನಿ ಸರ್ಕಾರ ನೆಲದ ಮೇಲೆ ಕಣ್ಣಿಡಲಿ: ಮೋದಿಗೆ ಕಮಲ್ ಹಾಸನ್ ಎಚ್ಚರಿಕೆ

ದೇಶದಲ್ಲಿ ಬಡವರು ಮತ್ತು ಕಾರ್ಮಿಕರ ಸಂಕಷ್ಟ ಕೇಳುವವರಿಲ್ಲವಾಗಿದೆ. ಈ ಸಂಕಷ್ಟ ಹೀಗೆ ಮುಂದುವರಿದರೆ ಇದು ಕೊರೋನಾಗಿಂತ ದೊಡ್ಡ ಸಂಕಷ್ಟವಾಗಲಿದೆ.

ಚೆನ್ನೈ: ವಲಸೆ ಕಾರ್ಮಿಕರ ಸಹನೆಯ ಟೈಮ್ ಬಾಂಬ್ ಸಿಡಿಯುವ ಮೊದಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ನೆಲದ ಮೇಲೆ ಕಣ್ಣಿಡಲಿ ಎಂದು ಖ್ಯಾತ ಚಲನಚಿತ್ರ ನಟ ಮತ್ತು ಮಕ್ಕಳ್ ನಿಧಿ ಮೈಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಎಚ್ಚರಿಸಿದ್ದಾರೆ.

ದೇಶದಲ್ಲಿ ಬಡವರು ಮತ್ತು ಕಾರ್ಮಿಕರ ಸಂಕಷ್ಟ ಕೇಳುವವರಿಲ್ಲವಾಗಿದೆ. ಈ ಸಂಕಷ್ಟ ಹೀಗೆ ಮುಂದುವರಿದರೆ ಇದು ಕೊರೋನಾಗಿಂತ ದೊಡ್ಡ ಸಂಕಷ್ಟವಾಗಲಿದೆ. ಕೇಂದ್ರ ಸರ್ಕಾರ ಇವರ ಕಷ್ಟಗಳನ್ನು ಆಲಿಸಿ ಪರಿಹಾರ ಮಾರ್ಗಗಳನ್ನು ಸೂಚಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶ ಭಾರಿ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಲಾಕ್ ಡೌನ್ ಘೊಷಣೆಯಾದ ಬಳಿಕ ದೇಶದಾದ್ಯಂತ ಲಕ್ಷಾಂತರ ವಲಸೆ ಕಾರ್ಮಿಕರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಮಾರ್ಚ್ 14 ರಂದು ಲಾಕ್ ಡೌನ್ ವಿಸ್ತರನೆ ಘೋಷಣೆಯಾದ ಬಳಿಕ ಕಾರ್ಮಿಕರ ಆಕ್ರೋಶ ಇನ್ನಷ್ಟು ಜಾಸ್ತಿಯಾಗಿದ್ದು ಮುಂಬೈನ ಬಾಂದ್ರಾ ಸೇರಿದಂತೆ ಹಲವೆಡೆ ವಲಸೆ ಕಾರ್ಮಿಕರು ರೊಚ್ಚಿಗೆದ್ದು ಬೀದಿಗ್ ಇಳಿದಿದ್ದಾರೆ. ಒಂದೋ ನಮ್ಮನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಇಲ್ಲ ನಮಗೆ ಅಗತ್ಯ ವಸ್ತುಗಳನ್ನು ನೀಡಿ ಎಂದು ಆಗ್ರಹಿಸಿದ್ದಾರೆ.

‘ಸಿನೆಮಾ ಥಿಯೇಟರ್‌ಗಳಲ್ಲಿ ಪ್ರೀಮಿಯಂ ಟಿಕೆಟ್ ಖರೀದಿಸುವ ವರ್ಗದ ಜನರ ನಿರ್ದೇಶನದಂತೆ ಮೋದಿ ಸರ್ಕಾರ ನಡೆದುಕೊಳ್ಳುತ್ತಿದೆ. ಈ ಬಾಲ್ಕನಿ ಜನರು ಮತ್ತು ಸರ್ಕಾರ ನೆಲದ ಮೇಲಿನ ನೈಜ ಸಮಸ್ಯೆಗಳನ್ನು ಮನಗಾಣದಿದ್ದರೆ ಟೈಮ್ ಬಾಂಬ್ ಸಿಡಿಯಲಿದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

Get real time updates directly on you device, subscribe now.