ಜನಪರ ಹೋರಾಟಗಾರ, ಪ್ರಖರ ವಾಗ್ಮಿ ಮಹೇಂದ್ರ ಕುಮಾರ್ ಇನ್ನಿಲ್ಲ

ತಮ್ಮ ಪ್ರಖರ ಮತುಗಳು, ದಿಟ್ಟ ಸಾಮಾಜಿಕ, ಜನಪರ ಕಾಳಜಿಯ ಮೂಲಕ ರಾಜ್ಯದ ಜನಸಾಮಾನ್ಯರ ಕಣ್ಮಣಿಯಾಗಿದ್ದ ಮಹೇಂದ್ರ ಕುಮಾರ್ ನಿಧನರಾಗಿದ್ದಾರೆ.

ಬೆಂಗಳೂರು: ತಮ್ಮ ಪ್ರಖರ ಮತುಗಳು, ದಿಟ್ಟ ಸಾಮಾಜಿಕ, ಜನಪರ ಕಾಳಜಿಯ ಮೂಲಕ ರಾಜ್ಯದ ಜನಸಾಮಾನ್ಯರ ಕಣ್ಮಣಿಯಾಗಿದ್ದ ಮಹೇಂದ್ರ ಕುಮಾರ್ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ.

ಬಜರಂಗದಳದ ಮೂಲಕ ತಮ್ಮ ಸಾಮಾಜಿಕ ಜೀವನ ಆರಂಭಿಸಿದ್ದ ಮಹೇಂದ್ರ ಕುಮಾರ್ ಬಳಿಕ ಸಂಘಟನೆಯನ್ನು ಬಿಟ್ಟು ಸರ್ವಧರ್ಮ ಸೌಹಾರ್ದ, ಸಾಮಾರಸ್ಯದ ಕುರಿತು ಕಾಳಜಿಯಿಂದ ದುಡಿಯುತ್ತಿದ್ದರು. ರಾಜ್ಯದಾದ್ಯಂತ ಅಪಾರ ಜನಮನ್ನಣೆ ಗಳಿಸಿದ್ದರು. ಸಿಎಎ, ಎನ್‌ಆರ್‌ಸಿ ವಿರೋಧಿ ಹೋರಾಟದ ಸಂದರ್ಭದಲ್ಲಿ ಮಂಚೂಣಿಯಲ್ಲಿದ್ದು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು.

ನಿನ್ನೆ ರಾತ್ರಿಯಿಂದ ಅವರಿಗೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡಿದ್ದು ಮುಂಜಾನೆ ರಾಮಯ್ಯ ಆಸ್ಪತ್ರೆಯಲ್ಲಿ ಅವರು ಮೃತರಾಗಿದ್ದಾರೆ. ಮಹೇಂದ್ರ ಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಶಾಂತಿಪ್ರಿಯ, ಸೌಹಾರ್ದಪರ, ಪ್ರಗತಿಪರ ನಿಲುವುಗಳ ಮಹೇಂದ್ರ ಕುಮಾರ್ ಅವರ ನಿಧನ ರಾಜ್ಯಕ್ಕೆ ಬಹು ದೊಡ್ಡ ಆಘಾತ, ಅಪಾರ ನೋವು ತಂದಿದೆ. ‘ಕರಾವಳಿ ಕರ್ನಾಟಕ’ ಮಹೇಂದ್ರ ಕುಮಾರ್ ಅವರ ನಿಧಾನಕ್ಕೆ ಗಾಢ ಸಂತಾಪವನ್ನು ಸೂಚಿಸುತ್ತಿದೆ.

Get real time updates directly on you device, subscribe now.