ಮುಸ್ಲಿಮರ ವಿರುದ್ಧ ಹೇಟ್ ಸ್ಪೀಚ್: UAEಯಲ್ಲಿ ಸಚಿನ್ ಕಿನ್ನಿಗೋಳಿ ಕೆಲಸದಿಂದ ವಜಾ. ತನಿಖೆಗೆ ಆದೇಶ 

ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ಸರಣಿ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿರುವ ಆರೋಪದಲ್ಲಿ ಸಚಿನ್ ಕಿನ್ನಿಗೋಳಿ ಸೇರಿದಂತೆ ಮೂವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಕೆಲಸದಿಂದ ವಜಾ ಮಾಡಲಾಗಿದ್ದು ತನಿಖೆಗೆ ಆದೇಶಿಸಲಾಗಿದೆ.

ಕರಾವಳಿ ಕರ್ನಾತಕ ವರದಿ
ಅಬುಧಾಬಿ: ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ಸರಣಿ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿರುವ ಆರೋಪದಲ್ಲಿ ಸಚಿನ್ ಕಿನ್ನಿಗೋಳಿ ಸೇರಿದಂತೆ ಮೂವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಕೆಲಸದಿಂದ ವಜಾ ಮಾಡಲಾಗಿದ್ದು ತನಿಖೆಗೆ ಆದೇಶಿಸಲಾಗಿದೆ.

ಭಾರತದ ಅನೇಕರು ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ಹಾಗೂ ಅರಬ್ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮತ್ತು ನಿಂದನಾತ್ಮಕ ಪೋಸ್ಟ್‌ಗಳನ್ನು ಹಾಕುತ್ತಿರುವುದು ಇತ್ತೀಚೆಗೆ ಗಲ್ಫ್ ರಾಷ್ಟಗಳ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದ ಹಲವು ಹಿಂದೂಗಳು ಉದ್ಯೋಗ ಕಳೆದುಕೊಂಡು ತನಿಖೆ ಎದುರಿಸುತ್ತಿದ್ದಾರೆ. ಇಸ್ಲಾಮೊಫೋಬಿಯಾದ ಈ ರೀತಿಯ ಪೋಸ್ಟ್‌ಗಳ ಕುರಿತು ಯುಎಇ ರಾಜಕುಮಾರಿ ಹಿಂದ್ ಅಲ್ ಖಾಸ್ಸಿಮಿ ಸೇರಿದಂತೆ ಹಲವು ರಾಷ್ಟ್ರಗಳ ಮುಖ್ಯಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಪೋಸ್ತ್‌ಗಳನ್ನು ಹಾಕುತ್ತಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈ ರಾಷ್ಟ್ರಗಳು ಎಚ್ಚರಿಸಿವೆ.

ಯುಎಇಯ ಪ್ರಸಿದ್ಧ ರೆಸ್ಟಾರೆಂಟ್ ಒಂದರ ಬಾಣಸಿಗ ರೋಹಿತ್ ರಾವತ್, ಶಾರ್ಜಾದಲ್ಲಿ ನ್ಯುಮಿಕ್ಸ್ ಆಟೊಮೇಷನ್ ಎಫ್‌ಝೆಡ್‌ಸಿ ಎಂಬ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ಮಂಗಳೂರಿನ ಕಿನ್ನಿಗೋಳಿಯ ಸಚಿನ್ ಕಿನ್ನಿಗೋಳಿ ಹಾಗೂ ಇನ್ನೋರ್ವ ಯುವಕ (ಹೆಸರು ಬಹಿರಂಗಪಡಿಸಿಲ್ಲ) ಈಗ ಉದ್ಯೋಗ ಕಳೆದುಕೊಂಡಿದ್ದಾರೆ. ಸಚಿನ್ ಕಿನ್ನಿಗೋಳಿ ಭಾರತದಲ್ಲಿ ಕೋವಿಡ್ 19 ಹರಡುವಿಕೆಗೆ ಮುಸ್ಲಿಮರೇ ಕಾರಣ ಎಂಬತಹ ಪೋಸ್ಟ್‌ಗಳನ್ನು ಹಾಕಿದ್ದು ಇನ್ನೂ ಹಲವಾರು ಇಸ್ಲಾಮ್ ಮತ್ತು ಮುಸ್ಲಿಮ್ ನಿಂದನೆಯ ಪೋಸ್ತ್‌ಗಳನ್ನು ನಿರಂತರವಾಗಿ ಶೇರ್ ಮಾಡುತ್ತಲೇ ಬಂದಿದ್ದ. ಇದೀಗ ಈ ಯುವಕನ ವಿರುದ್ಧ ಕಂಪೆನಿ ತನಿಖೆಗೆ ಆದೇಶಿಸಿದೆ ಮತ್ತು ಕೆಲಸದಿಂದ ವಜಾ ಮಾಡಿದೆ.

ಕುವೈತ್ ಆಸ್ಪತ್ರೆಯಲ್ಲಿ ಕೆಲಸದಲ್ಲಿರುವ ಕರಾವಳಿಯ ಮಹಿಳೆಯೋರ್ವರು ಸಹ ಇದೇ ರೀತಿಯ ಆರೋಪಕ್ಕೆ ಗುರಿಯಾಗಿ ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದು ತನ್ನನ್ನು ಕ್ಷಮಿಸುವಂತೆ ಕಣ್ಣೀರು ಹಾಕುತ್ತಾ ಅವರು ಶೇರ್‍ ಮಾಡಿದ್ದ ಆಡಿಯೊ ಸಂದೇಶ ಇತ್ತೀಚೆಗೆ ವೈರಲ್ ಆಗಿತ್ತು.

ಯಾವುದೇ ಧರ್ಮದ ನಿಂದನೆ, ಅವಹೇಳನ, ಹೇಟ್ ಸ್ಪೀಛ್ ಪೋಸ್ಟ್‌ಗಳನ್ನು ಗಲ್ಫ್ ರಾಷ್ಟ್ರಗಳು ಸಹಿಸುವುದಿಲ್ಲ, ಆಯಾ ದೇಶಗಳಲ್ಲಿ ಕಾನೂನು ಪಾಲಿಸಿ ಮತ್ತು ಎಲ್ಲ ಧರ್ಮಗಳನ್ನು ಗೌರವಿಸಿ ಎಂದು ಭಾರತದ ಹಲವಾರು ರಾಯಬಾರಿಗಳು ಮನವಿ ಮಾಡಿಕೊಂಡಿದ್ದರೂ ಮತ್ತೆ ಮತ್ತೆ ಹೇಟ್ ಸ್ಪೀಚ್ ಪೋಸ್ಟ್‌ಗಳ ಮೂಲಕ ಭಾರತೀಯರು ಇಸ್ಲಾಮಿಕ್ ರಾಷ್ಟ್ರಗಳ ಆಕ್ರೋಶಕ್ಕೆ ಒಳಗಾಗಿ ಉದ್ಯೋಗ ಕಳೆದುಕೊಳ್ಳುತ್ತಲೇ ಇದ್ದಾರೆ.

ಇದನ್ನೂ ಒದಿ:
►►ಹಿಂದೂಗಳು ಯುಎಇಗೆ ಬರಬಾರದು ಎಂದು ನಾನು ಹೇಳಿದರೆ ಭಾರತೀಯರಿಗೆ ಹೇಗನಿಸಬಹುದು? ರಾಜಕುಮಾರಿ ಹಿಂದ್ ಅಲ್ ಖಾಸ್ಸಿಮಿ ಪ್ರಶ್ನೆ – https://bit.ly/3bUA9TQ

Get real time updates directly on you device, subscribe now.