ಉದ್ಯೋಗಿಗಳಿಗೆ ಉಡುಪಿ-ಮಂಗಳೂರು ನಡುವೆ ಓಡಾಡಲು ಪಾಸ್ ಬೇಕಾಗಿಲ್ಲ: ರಾಜ್ಯ ಸರ್ಕಾರದ ಆದೇಶ

ಉಡುಪಿ ಮತ್ತು ಮಂಗಳೂರು ಜಿಲ್ಲೆಯನು ಒಂದು ಯೂನಿಟ್ ಆಗಿ ರಾಜ್ಯ ಸರ್ಕಾರ ಪರಿಗಣಿಸಿದೆ.

ತಾವು ಕೆಲಸ ಮಾಡುತ್ತಿರುವ ಕಂಪೆನಿಯ ಪತ್ರ ಅಥವಾ ಐಡೆಂಟಿಟಿ ಕಾರ್ಡ್ ಇದ್ದರೆ ಎರಡೂ ಜಿಲ್ಲೆಗಳ ನಡುವೆ ಮುಕ್ತವಾಗಿ ಓಡಾಡಬಹುದಾಗಿದೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ನಡುವೆ ನಿತ್ಯವೂ ಸಾವಿರಾರು ಉದ್ಯೋಗಿಗಳು ಉದ್ಯೋಗಕ್ಕಾಗಿ ಪ್ರಯಾಣ ಮಾಡುವುದು ಅನಿವಾರ್ಯ ಎಂದು ಮನಗಂಡಿರುವ ರಾಜ್ಯ ಸರ್ಕಾರ ಇದೀಗ ಈ ಎರಡು ಜಿಲ್ಲೆಗಳ ನಡುವೆ ಓಡಾಡುವ ಉದ್ಯೋಗಿಗಳಿಗೆ ಪಾಸ್ ಕಡ್ಡಾಯವಲ್ಲ ಎಂದು ಆದೇಶ ಹೊರಡಿಸಿದೆ.

ಎರಡೂ ಜಿಲ್ಲೆಗಳ ನಡುವೆ ನಿತ್ಯ ಪ್ರಯಾಣ ಮಾಡುವ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನೌಕರರಿಗೆ ಪಾಸ್ ಪಡೆದು ಓಡಾಡುವ ಅನಿವಾರ್ಯತೆ ಇಲ್ಲ. ತಾವು ಕೆಲಸ ಮಾಡುತ್ತಿರುವ ಕಂಪೆನಿಯ ಪತ್ರ ಅಥವಾ ಐಡೆಂಟಿಟಿ ಕಾರ್ಡ್ ಇದ್ದರೆ ಎರಡೂ ಜಿಲ್ಲೆಗಳ ನಡುವೆ ಮುಕ್ತವಾಗಿ ಓಡಾಡಬಹುದಾಗಿದೆ.

ಈ ಉದ್ದೇಶಕ್ಕಾಗಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯನು ಒಂದು ಯೂನಿಟ್ ಆಗಿ ರಾಜ್ಯ ಸರ್ಕಾರ ಪರಿಗಣಿಸಿದೆ. ಪಾಸ್ ಇಲ್ಲದ ಈ ಮುಕ್ತ ಓಡಾಟದ ಅವಕಾಶ ಕೇವಲ ಉದ್ಯೋಗಿಗಳಿಗೆ ಮಾತ್ರ ವಿನಃ ಸಾರ್ವಜನಿಕರು ಈ ಎರಡು ಜಿಲ್ಲೆಗಳ ನಡುವೆ ಪ್ರಯಾಣ ಮಾಡುವಂತಿಲ್ಲ.

Get real time updates directly on you device, subscribe now.