ಉಡುಪಿ: ಕೊರೋನಾ ಮುಕ್ತ 18 ಮಕ್ಕಳ ಸಹಿತ 45ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಜಿಲ್ಲಾಧಿಕಾರಿ ಮಕ್ಕಳಿಗೆ ಚಾಕಲೇಟ್, ವಿಶೇಷ ಉಡುಗೊರೆ ನೀಡಿ ಶುಭ ಕೋರಿ ಬೀಳ್ಕೊಟ್ಟರು.

ಜಿಲ್ಲೆಯಲ್ಲಿ ಒಟ್ಟು ಐವತ್ತು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಂತಾಗಿದ್ದು, ಸಾರ್ವಜನಿಕರ ಆತಂಕ ಇದರಿಂದ ದೂರ ಆಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಇಲ್ಲಿನ ಟಿ.ಎಂ.ಎ.ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ಮಕ್ಕಳ ಸಹಿತ 45ಮಂದಿ ಕೊರೋನಾ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಬಿಡುಗಡೆ ಹೊಂದಿದವರಲ್ಲಿ ಹೆಚ್ಚಿನವರು ಮುಂಬೈ ಮತ್ತು ದುಬೈಯಿಂದ ಬಂದವರಾಗಿದ್ದಾರೆ. ಬಿಡುಗಡೆಗೊಂಡವರಲ್ಲಿ ಇಂದು ವರ್ಷದ ಮಗು ಕೂಡ ಸೇರಿದೆ. ಜಿಲ್ಲಾಧಿಕಾರಿ ಮಕ್ಕಳಿಗೆ ಚಾಕಲೇಟ್, ವಿಶೇಷ ಉಡುಗೊರೆ ನೀಡಿ ಶುಭ ಕೋರಿ ಬೀಳ್ಕೊಟ್ಟರು.

ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಬಹುತೇಕ ಮಂದಿ ಗುಣಮುಖರಾಗಿದ್ದು, ಮೇ.31ರಂದು ಬಿಡುಗಡೆಯಾಗಲಿದ್ದಾರೆ ಎಂದರು.

ಸರಕಾರದ ನಿಯಮದ ಪ್ರಕಾರ ಕೋವಿಡ್ ಲಕ್ಷಣ ಇಲ್ಲದೇ ಇರುವ ಏಳು ದಿನಕ್ಕಿಂತ ಹೆಚ್ಚಿನ ಚಿಕಿತ್ಸೆ ಪೂರೈಸಿದ ಸೋಂಕಿತರಲ್ಲಿ ನೆಗೆಟಿವ್ ವರದಿಯಾದವರನ್ನು ಇಂದು ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಲ್ಲಿ ನಲವತ್ತೈದು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಂತಾಗಿದ್ದು, ಸಾರ್ವಜನಿಕರ ಆತಂಕ ಇದರಿಂದ ದೂರ ಆಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಡಿಎಚ್.ಒ ಡಾ. ಸುಧೀರ್‌ಚಂದ್ರ ಸೂಡ, ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕೆ.ಎಂ.ಸಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಅವಿನಾಶ್ ಶೆಟ್ಟಿ, ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ. ಶಶಿ ಕಿರಣ್ ಮತ್ತಿತರರು ಇದ್ದರು.

Get real time updates directly on you device, subscribe now.