ಕಂಟೈನ್ಮೆಂಟ್ ಝೋನ್‌ಗಳಲ್ಲಿ ಜೂ.30ರ ವರೆಗೆ ದೇಶಾದ್ಯಂತ ಲಾಕ್‌ಡೌನ್ ವಿಸ್ತರಣೆ

ಜೂ.8ರಿಂದ ಮಾಲ್, ಹೊಟೇಲ್, ಆರಾಧನಾ ಕೇಂದ್ರಗಳ ಆರಂಭ.

ರಾತ್ರಿ9ರಿಂದ ಬೆಳಿಗ್ಗೆ5ರ ತನಕ ಕರ್ಪ್ಯೂ ಜಾರಿ. ಕಂಟೈನ್ಮೆಂಟ್ ಹೊರತಾದ ಪ್ರದೇಶಗಳಲ್ಲಿ ಆಯಾ ರಾಜ್ಯಗಳು ವಿನಾಯತಿ/ನಿರ್ಬಂಧ ವಿಧಿಸಬಹುದಾಗಿದೆ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ಕೇಂದ್ರ ಸರಕಾರವು ಕೊರೋನಾ ವೈರಸ್ ಹಬ್ಬುವುದನ್ನು ತಡೆಯುವ ನಿಟ್ಟಿನಲ್ಲಿ ಜೂ. 30ರ ತನಕ ಲಾಕ್‌ಡೌನ್ ವಿಸ್ತರಿಸಿದೆ. ಕಂಟೈನ್ಮೆಂಟ್ ಝೋನ್‌ಗಳಿಗೆ ಮಾತ್ರ ಲಾಕ್‌ಡೌನ್ 5.0 ಅನ್ವಯವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಕಂಟೈನ್ಮೆಂಟ್ ಹೊರತಾದ ಪ್ರದೇಶಗಳಲ್ಲಿ ಮುಂದಿನ ಒಂದು ತಿಂಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಯಲ್ಲಿ ವಿವರಿಸಲಾಗಿದ್ದು, ಆಯಾ ರಾಜ್ಯಗಳು ತಮ್ಮ ರಾಜ್ಯದ ಪರಿಸ್ಥಿತಿಗಳನ್ನು ಹೊಂದಿಕೊಂಡು ವಿನಾಯತಿ/ನಿರ್ಬಂಧ ವಿಧಿಸಬಹುದಾಗಿದೆ.

ಅಂತರರಾಷ್ಟ್ರೀಯ ವಿಮಾನ ಸಂಚಾರ, ಸಿನೆಮಾ ಗೃಹ, ಈಜು ಕೊಳಗಳು, ಮೆಟ್ರೋ ಸಂಚಾರ ಬಗ್ಗೆ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲಾಗುವುದೆಂದು ಪ್ರಕಟಿಸಲಾಗಿದೆ.

ಜೂನ್.8ರಿಂದ ದೇವಸ್ಥಾನಗಳು ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳು, ಮಾಲ್, ಹೊಟೇಲ್ ಇತ್ಯಾದಿ ಆರಂಭಿಸಬಹುದಾಗಿದೆ. ರಾತ್ರಿ9ರಿಂದ ಬೆಳಿಗ್ಗೆ5ರ ತನಕ ಕರ್ಪ್ಯೂ ಜಾರಿಯಲ್ಲಿದೆ.

Get real time updates directly on you device, subscribe now.