ಕುಂದಾಪುರ: ಚುಂಗಿಗುಡ್ಡೆಯಲ್ಲಿ ಸೀಲ್ ಡೌನ್ ಮಾಡಿಲ್ಲ; ತೋಟಕೇರಿಯಲ್ಲಿ ಸೀಲ್‌ ಡೌನ್

ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ ಗ್ರಾಮದ ತೋಟಕೇರಿ, ಆಲೂರು ಪಂಚಾಯತ್ ವ್ಯಾಪ್ತಿಯ ಸೆಳಕೋಡ್‌ಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ನಾಡ ಗ್ರಾಮದ ಚುಂಗಿಗುಡ್ಡೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ ಎಂಬ ವದಂತಿ ಹಬ್ಬಿದ್ದು, ಚುಂಗಿಗುಡ್ಡೆಯಲ್ಲಿ ಯಾವುದೇ ಸೀಲ್ ಡೌನ್ ಮಾಡಲಾಗಿಲ್ಲ. ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ ಗ್ರಾಮದ ತೋಟಕೇರಿ, ಆಲೂರು ಪಂಚಾಯತ್ ವ್ಯಾಪ್ತಿಯ ಸೆಳಕೋಡ್‌ಗಳಲ್ಲಿ ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿಗಳ ಮನೆಯ ಇನ್ನೂರು ಮೀಟರ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದೆ.

ತೋಟಕೇರಿಯಿಂದ ಚುಂಗಿಗುಡ್ಡೆ ಬಹುದೂರದಲ್ಲಿದ್ದು, ಚುಂಗಿಗುಡ್ಡೆಯಲ್ಲಿರುವ ಯಾವುದೇ ವ್ಯಕ್ತಿಗೂ ಸೀಲ್ ಡೌನ್ ಯಾವುದೇ ರೀತಿಯಲ್ಲೂ ಪರಿಣಾಮ ಬೀರುವುದಿಲ್ಲ ಎಂದು ಚುಂಗಿಗುಡ್ಡೆಯ ಧರ್ಮೇಂದ್ರ ಹೆಬ್ಬಾರ್ ಅವರು ತಿಳಿಸಿದ್ದಾರೆ.

ಕೋಟ ತಟ್ಟು ಪಂಚಾಯತ್ ವ್ಯಾಪ್ತಿಯಲ್ಲೂ ಇಲ್ಲಿ ವಾಸವಿರುವ ಶಂಕರನಾರಾಯಣ ಪೊಲೀಸ್ ಠಾಣೆಯ ಸಿಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆಯಲ್ಲಿ ಮೂರು ಮನೆಗಳನ್ನು ಸೀಲ್‌ ಡೌನ್ ಮಾಡಲಾಗಿದೆ. ಪೊಲೀಸ್ ಸಿಬಂದಿಯ ಸ್ವ್ಯಾಬ್ ಟೆಸ್ಟ್ ಮತ್ತೊಮ್ಮೆ ಮಾಡಲಾಗುತ್ತಿದ್ದು, ಪರೀಕ್ಷಾ ವರದಿ ನಿರೀಕ್ಷಿಸಲಾಗುತ್ತಿದೆ.

Get real time updates directly on you device, subscribe now.