ಕಾಸರಗೋಡು: 6ಕೆಜಿ ಗಾಂಜಾ ಸಾಗಾಟ, ಮೂವರ ಸೆರೆ

ಪೊಲೀಸರು ಕುಂಬಳೆ ಪೇಟೆಯಲ್ಲಿ ಗಸ್ತು ತಿರುಗುವ ಸಂದರ್ಭ ಆರೋಪಿಗಳು ಇನ್ನೋವಾ ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದರು.

ಕರಾವಳಿ ಕರ್ನಾಟಕವರದಿ
ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪದಲ್ಲಿ ಮೂವರನ್ನು ಬಂಧಿಸಿರುವ ಕುಂಬಳೆ ಪೊಲೀಸರು ಆರು ಕೆಜಿ ಗಾಂಜಾ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.

ತಲಶ್ಶೇರಿಯ ಹರ್ಷದ್(20), ಸೀತಾಂಗೋಳಿ ಮುಗು ನಿವಾಸಿ ಮಹ್ಮದ್ ಶರೀಫ್(20), ತಲಶ್ಶೇರಿ ಧರ್ಮಡ್ಕ ನಿವಾಸಿ ಸಲ್ಮಾನ್(22) ಬಂಧಿತರು.

ಇಂದು ಮುಂಜಾನೆ ಪೊಲೀಸರು ಕುಂಬಳೆ ಪೇಟೆಯಲ್ಲಿ ಗಸ್ತು ತಿರುಗುವ ಸಂದರ್ಭ ಆರೋಪಿಗಳು ಇನ್ನೋವಾ ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದರು.

ಎಸ್ಸೈ ವಿನೋದ್ ಕುಮಾರ್ ಮತ್ತು ಸಿಬಂದಿ ಬೆಂಬತ್ತಿ ಹಿಡಿದಿದ್ದಾರೆ.

 

Get real time updates directly on you device, subscribe now.