ದುಬೈ: ಗರ್ಭಿಣಿ ಪತ್ನಿ, ಇಬ್ಬರನ್ನು ಊರಿಗೆ ಕಳಿಸಿದ ಇಂಜಿನಿಯರ್ ಮೃತ್ಯು

ನಿತಿನ್ ಅವರು ಸೋಮವಾರ ಸಾವಪ್ಪಿದ್ದು, ಮಂಗಳವಾರ ಅವರ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ.

ದುಬೈಯಲ್ಲಿ ಊರಿಗೆ ಬರಲು ಹಣವಿಲ್ಲದೇ, ಅಲ್ಲಿ ಬದುಕಲೂ ಹಣವಿಲ್ಲದೇ ಕಷ್ಟದಲ್ಲಿದ್ದ ಇಬ್ಬರನ್ನು ಊರಿಗೆ ಕಳಿಸಿ ಆರ್ಥಿಕ ನೆರವನ್ನೂ ನೀಡಿ ಹೃದಯ ಶ್ರೀಮಂತಿಕೆ ತೋರಿದ್ದರು.

ಕರಾವಳಿ ಕರ್ನಾಟಕ ವರದಿ
ದುಬೈ: ಕೋವಿಡ್ ಲಾಕ್‍ಡೌನ್ ಸಂದರ್ಭ ಯು.ಎ.ಇಯಲ್ಲಿ ಅತಂತ್ರ ಸ್ಥಿತಿಯಲ್ಲಿದ್ದವರನ್ನು ಭಾರತಕ್ಕೆ ವಾಪಾಸ್ ಕರೆಸಿಕೊಳ್ಳಬೇಕೆಂದು ಪತ್ನಿಯ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಅಪೀಲು ಸಲ್ಲಿಸಿದ್ದ ಕೇರಳದ ಇಂಜಿನಿಯರ್ ಸಾವಪ್ಪಿದ್ದಾರೆ.

ನಿತಿನ್ ಚಂದ್ರನ್ ಹೃದಯಾಘಾತದಿಂದ ಮರಣ ಹೊಂದಿರಬಹುದೆಂದು ಶಂಕಿಸಲಾಗಿದೆ. ಮೇ.7ರಂದು ವಂದೇ ಭಾರತ್ ಮಿಷನ್ ಅಡಿ ಪತ್ನಿ ಅತಿರಾ(27) ಅವರು ಕೇರಳಕ್ಕೆ ಮರಳಿದ್ದರು. ನಿತಿನ್ ಅವರು ಸೋಮವಾರ ಸಾವಪ್ಪಿದ್ದು, ಮಂಗಳವಾರ ಅವರ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಂದರ್ಭ ನಿತಿನ್ ಅವರು ತಾನು ಊರಿಗೆ ಬರಲು ಸಿಕ್ಕಿದ್ದ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ದುಬೈಯಲ್ಲಿ ಊರಿಗೆ ಬರಲು ಹಣವಿಲ್ಲದೇ, ಅಲ್ಲಿ ಬದುಕಲೂ ಹಣವಿಲ್ಲದೇ ಕಷ್ಟದಲ್ಲಿದ್ದ ಇಬ್ಬರನ್ನು ಊರಿಗೆ ನಿತಿನ್ ಕಳಿಸಿದ್ದು, ಅವರಿಗೆ ಆರ್ಥಿಕ ನೆರವನ್ನೂ ನೀಡಿ ಹೃದಯ ಶ್ರೀಮಂತಿಕೆ ತೋರಿದ್ದರು ಎಂದು ಮೂಲಗಳು ತಿಳಿಸಿವೆ.

ನಿತಿನ್ ಮತ್ತು ಅತೀರಾ ಅವರು ದುಬೈಯಲ್ಲಿ ಬ್ಲಡ್ ಡೋನರ್ಸ್ ಕೇರಳ-ಯು.ಎ.ಇ ಘಟಕದ ಸದಸ್ಯರಾಗಿ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದರು.

ಅದಿರಾ ಅವರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ಆಧಾರದಲ್ಲಿ ಅವರಿಗೆ ಊರಿಗೆ ಬರಲು ಆದ್ಯತೆಯ ನೆಲೆಯಲ್ಲಿ ಅವಕಾಶ ಮಾಡಿಕೊಡಲಾಗಿತ್ತು.

 

Get real time updates directly on you device, subscribe now.