ಜೂ.29 ರಾಜ್ಯ ವಿಧಾನ ಪರಿಷತ್ ಚುನಾವಣೆ

ಕಾಂಗ್ರೆಸ್ ಸದಸ್ಯರಾದ ನಝೀರ್ ಅಹ್ಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ್, ಎನ್.ಎಸ್.ಬೋಸರಾಜು, ಎಚ್.ಎಂ.ರೇವಣ್ಣ, ಜೆಡಿಎಸ್ ಸದಸ್ಯ ಟಿ.ಎ.ಶರವಣ, ಶರವಣ, ಬಿಜೆಪಿಯ ಡಿ.ಯು.ಮಲ್ಲಿಕಾರ್ಜುನ ಅವರ ಸದಸ್ಯತ್ವದ ಅವಧಿ ಜೂ.30ರಂದು ಅಂತ್ಯ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ರಾಜ್ಯ ವಿಧಾನ ಪರಿಷತ್ ಏಳು ಸ್ಥಾನಗಳಿಗೆ ಜೂ.29ರಂದು ಚುನಾವಣೆ ನಡೆಯಲಿದೆ. ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರ ಪ್ರಸ್ತಾವನೆ ಮೇರೆಗೆ ಚುನಾವಣೆ ನಿಗದಿ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಚುನಾವಣೆ ಪ್ರಕ್ರಿಯೆಗಳು:

ಜೂ.11 ಅಧಿಸೂಚನೆ, ಜೂ.18 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ, ಜೂ.19 ನಾಮಪತ್ರ ಪರಿಶೀಲನೆ, ಜೂ.22 ನಾಮಪತ್ರ ಹಿಂಪಡೆಯಲು ಕೊನೆ ದಿನ, ಜೂ.29 ಬೆಳಿಗ್ಗೆ 9ರಿಂದ ಸಂಜೆ4ರವರೆಗೆ ಮತದಾನ- ಸಂಜೆ5ರಿಂದ ಮತ ಎಣಿಕೆ, ಜೂ.30 ಚುನಾವಣಾ ಪ್ರಕ್ರಿಯೆ ಅಂತ್ಯ.

ಕಾಂಗ್ರೆಸ್ ಸದಸ್ಯರಾದ ನಝೀರ್ ಅಹ್ಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ್, ಎನ್.ಎಸ್.ಬೋಸರಾಜು, ಎಚ್.ಎಂ.ರೇವಣ್ಣ, ಜೆಡಿಎಸ್ ಸದಸ್ಯ ಟಿ.ಎ.ಶರವಣ, ಶರವಣ, ಬಿಜೆಪಿಯ ಡಿ.ಯು.ಮಲ್ಲಿಕಾರ್ಜುನ ಅವರ ಸದಸ್ಯತ್ವದ ಅವಧಿ ಜೂ.30ರಂದು ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಚುನಾವಣೆ ಘೋಷಿಸಲಾಗಿದೆ.

Get real time updates directly on you device, subscribe now.