ಡಿವೈ‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಕೇರಳ ಸಿಎಂ ಪುತ್ರಿ ವಿವಾಹ

ಸದಾ ಕಾಲವೂ ಹೋರಾಟ ಮನೋಭಾವದ ರಿಯಾಝ್ ಮತ್ತು ಸ್ವಂತ ಐಟಿ ಉದ್ಯಮ ನಡೆಸುತ್ತಿರುವ ವೀಣಾ ಸರಳ ವಿವಾಹ ನಡೆಯಲಿದೆ.

ಕಾನೂನು ಪದವೀಧರ ರಿಯಾಝ್ ಅವರು ನಿವೃತ್ತ ಐಪಿಎಸ್ ಅಧಿಕಾರಿ ಪಿ.ಎಂ.ಅಬ್ದುಲ್ ಖಾದರ್ ಅವರ ಮಗ.

ಕರಾವಳಿ ಕರ್ನಾಟಕ ವರದಿ
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಅವರ ವಿವಾಹವು ಡಿವೈ‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮೊಹ್ಮದ್ ರಿಯಾಝ್ ಅವರೊಂದಿಗೆ ನಡೆಯಲಿದೆ.

ಜೂ.15ರಂದು ತಿರುವನಂತಪುರದಲ್ಲಿ ಸರಳ ವಿವಾಹ ನಡೆಯಲಿದೆ.

ಪಿಣರಾಯಿ ವಿಜಯನ್-ಕಮಲಾ ದಂಪತಿ ಪುತ್ರಿ ವೀಣಾ ಅವರು ಆರು ವರ್ಷಗಳಿಂದ ಬೆಂಗಳೂರಿನಲ್ಲಿ ಐಟಿ ಉದ್ಯಮಿಯಾಗಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಯನ್ನು ಬೀಫ್ ಅಡುಗೆ ತಯಾರಿಸುವುದರ ಮೂಲಕ ಮಾಡಿದ್ದ ರಿಯಾಝ್ ಅವರು ಕೇರಳದಲ್ಲಿ ಜನಪ್ರಿಯರಾಗಿದ್ದಾರೆ.

2009ರ ಲೋಕಸಭಾ ಚುನಾವಣೆಯಲ್ಲಿ ಕೋಝಿಕ್ಕೋಡ್‌ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ವಿರುದ್ಧ ಎಂಟುನೂರು ಮತಗಳಿಂದ ಸೋತಿದ್ದರು. ಸದಾ ಕಾಲವೂ ಹೋರಾಟ ಮನೋಭಾವದ ರಿಯಾಝ್(44) ಮತ್ತು ಸ್ವಂತ ಐಟಿ ಉದ್ಯಮ ನಡೆಸುತ್ತಿರುವ ವೀಣಾ ಇಬ್ಬರಿಗೂ ಇದು ಎರಡನೇ ವಿವಾಹ.

ಕಾನೂನು ಪದವೀಧರ ರಿಯಾಝ್ ಅವರು ನಿವೃತ್ತ ಐಪಿಎಸ್ ಅಧಿಕಾರಿ ಪಿ.ಎಂ.ಅಬ್ದುಲ್ ಖಾದರ್ ಅವರ ಮಗ. ಡಾ. ಸಮೀರಾ ಎಂಬವರನ್ನು ಈ ಮೊದಲು ವಿವಾಹವಾಗಿದ್ದು, 2015ರಲ್ಲಿ ಬೇರ್ಪಟ್ಟಿದ್ದರು. ಮೊದಲ ಮದುವೆಯಿಂದ ಇಬ್ಬರು ಪುತ್ರರನ್ನು ಪಡೆದಿದ್ದಾರೆ.

ಟಿ. ವೀಣಾರಿಗೆ ಮೊದಲ ವಿವಾಹದಲ್ಲಿ ಓರ್ವ ಪುತ್ರನಿದ್ದಾನೆ.

Get real time updates directly on you device, subscribe now.