ಲಾಕ್‌ಡೌನ್ ಸಂಕಷ್ಟ: ಮಲ್ಪೆಯಲ್ಲಿ ಯುವ ಉದ್ಯಮಿ, ಕಬಡಿ ಪಟು ಬೋಟ್‌ನಲ್ಲೇ ಆತ್ಮಹತ್ಯೆ

ಮನೆ ಸಾಲ ಮತ್ತು ಬೋಟ್ ಸಾಲದಿಂದ ಕಂಗೆಟ್ಟಿದ್ದರು ಎನ್ನಲಾಗಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಕೋವಿಡ್ ಲಾಕ್‌ಡೌನ್‌ನಿಂದ ಉದ್ಯಮದಲ್ಲಿ ನಷ್ಟದ ಪರಿಣಾಮ ತೀವೃವಾಗಿ ನೊಂದ ಯುವ ಉದ್ಯಮಿ, ಕಬಡಿ ಪಟು ಭಾಗ್ಯರಾಜ್ ಎಂಬವರು ಬೋಟ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ರಾತ್ರಿ 11ಗಂಟೆ ಬಳಿಕ ಮನೆಯಿಂದ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಬಡಾನಿಡಿಯೂರಿನ ಬೈಲಕೆರೆ ಪೌಂಜಿ ಗುಡ್ಡೆ ನಿವಾಸಿ ಭಾಗ್ಯರಾಜ್ ಅವರು ಇತ್ತೀಚೆಗೆ ಮನೆ ಸಾಲ ಮತ್ತು ಬೋಟ್ ಸಾಲದಿಂದ ಕಂಗೆಟ್ಟಿದ್ದರು ಎನ್ನಲಾಗಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭ ಆರ್ಥಿಕವಾಗಿ ತುಂಬ ಹಿನ್ನೆಡೆ ಕಂಡು ಮನನೊಂದಿದ್ದರು.

ಮಲ್ಪೆ ಬಂದರ್‌ನಲ್ಲಿ ಬೋಟ್‌ನಲ್ಲಿ ಆತ್ಮಹತ್ಯೆಗೈದಿದ್ದಾರೆ. ಮಲ್ಪೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Get real time updates directly on you device, subscribe now.