ಪುತ್ತೂರು: ಪಲ್ಟಿಯಾಗಿ ಮನೆ ಅಂಗಳಕ್ಕೆ ಬಿದ್ದ ಬಸ್

ಬಸ್ ಚಾಲಕ ಹಾಗೂ ನಿರ್ವಾಹಕನಿಗೆ ಸ್ವಲ್ಪ ಗಾಯಗಳಾಗಿವೆ. ಪ್ರಯಾಣಿಕರಿಗೆ ಯಾವುದೇ ಅಪಾಯ ಆಗಿಲ್ಲ.

ಕರಾವಳಿ ಕರ್ನಾಟಕ ವರದಿ
ಪುತ್ತೂರು: ಪುತ್ತೂರಿನಿಂದ ಈಶ್ವರಮಂಗಲದತ್ತ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ತಿರುವಿನಲ್ಲಿ ಪಲ್ಟಿಯಾಗಿ ಮನೆಯೊಂದರ ಮೇಲೆ ಬಿದ್ದ ಘಟನೆ ನಡೆದಿದೆ.

ಸಾಂತ್ಯ ಎಂಬಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಇಪ್ಪತ್ತೈದು ಅಡಿ ಆಳದ ಮನೆ ಅಂಗಳಕ್ಕೆ ಬಿತ್ತು. ಬಸ್ ಚಾಲಕ ಹಾಗೂ ನಿರ್ವಾಹಕನಿಗೆ ಸ್ವಲ್ಪ ಗಾಯಗಳಾಗಿವೆ. ಇಪ್ಪತ್ತು ಮಂದಿ ಪ್ರಯಾಣಿಕರಿಗೆ ಯಾವುದೇ ಅಪಾಯ ಆಗಿಲ್ಲ. ಮನೆ ಹಂಚುಗಳು ಪುಡಿಯಾಗಿವೆ.

Get real time updates directly on you device, subscribe now.