ದಮಾಮ್‌ನಿಂದ 175ಕನ್ನಡಿಗರೊಂದಿಗೆ ಮಂಗಳೂರು ತಲುಪಿದ ಸಾಕೋ ವಿಮಾನ

ಸಾಕೋ ಕಂಪೆನಿ ನಿರ್ದೇಶಕರಾದ ಅಲ್ತಾಫ್ ಉಳ್ಳಾಲ್ ಮತ್ತು ಬಶೀರ್ ಸಾಗರ್ ಅವರು ಈ ವಿಮಾನದ ವೆಚ್ಚ ಭರಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕೋವಿಡ್ ಲಾಕ್‌ಡೌನ್ ಸಂದರ್ಭ ಸೌದಿಯಲ್ಲಿ ಸಿಲುಕಿದ್ದ 175ಕನ್ನಡಿಗರನ್ನು ಸಾಕೋ ಕಾಂಟ್ರ್ಯಾಕ್ಟಿಂಗ್ ಸಂಸ್ಥೆಯ ಬಾಡಿಗೆ ವಿಮಾನವು ಬುಧವಾರ ರಾತ್ರಿ ಮಂಗಳೂರಿಗೆ ಕರೆತಂದಿದೆ.

ಸಾಕೋ ಕಂಪೆನಿ ನಿರ್ದೇಶಕರಾದ ಅಲ್ತಾಫ್ ಉಳ್ಳಾಲ್ ಮತ್ತು ಬಶೀರ್ ಸಾಗರ್ ಅವರು ಈ ವಿಮಾನದ ವೆಚ್ಚ ಭರಿಸಿದ್ದಾರೆ. ಕೊರೋನಾ ಪರೀಕ್ಷೆಯ ವೆಚ್ಚ ಕೂಡ ಇವರ ಸಂಸ್ಥೆಯೇ ಪಾವತಿಸಲಿದೆ.

ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳು, ತುರ್ತು ವೈದ್ಯಕೀಯ ಸೌಲಭ್ಯದ ಅಗತ್ಯವಿರುವವರಿಗೆ ಆದ್ಯತೆ ಮೇರೆಗೆ ವಿಮಾನದಲ್ಲಿ ಬರಲು ಅವಕಾಶ ನೀಡಲಾಗಿದೆ. ಸಂಸ್ಥೆಯ ಯಾವುದೇ ಸಂಬಂಧಿಕರು ಈ ವಿಮಾನದಲ್ಲಿ ಬಂದಿಲ್ಲ. ಜನರ ಸೇವೆಯೇ ಆದ್ಯತೆಯಾಗಿದೆ ಎಂದು ಅಲ್ತಾಫ್ ಉಳ್ಳಾಲ್ ಅವರು ತಿಳಿಸಿದ್ದಾರೆ.

ಸೌದಿಯಲ್ಲಿನ ಭಾರತೀಯ ರಾಯಭಾರ ಕಚೇರಿ, ರಾಜ್ಯ ಉಪಮುಖ್ಯಮಂತ್ರಿ ಡಾ.ಅಶ್ವಥ ನಾರಾಯಣ, ಮಾಜಿ ಸಚಿವ ಯು.ಟಿ.ಖಾದರ್, ಅನಿವಾಸಿ ಭಾರತೀಯರ ಸಮಿತಿ ಮಾಜಿ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ನೀಡಿದ ಸಹಕಾರವನ್ನು ಅಲ್ತಾಫ್ ಉಳ್ಳಾಲ್ ಮತ್ತು ಬಶೀರ್ ಸಾಗರ್ ಅವರು ಸ್ಮರಿಸಿದ್ದಾರೆ.

Get real time updates directly on you device, subscribe now.