ದಮಾಮ್‌ನಿಂದ ಮಂಗಳೂರಿಗೆ 170ಕನ್ನಡಿಗರೊಂದಿಗೆ ಬಂದ ಎಕ್ಸ್‌ಪರ್ಟೈಸ್ ಸಂಸ್ಥೆಯ ಎರಡನೇ ವಿಮಾನ

ಈ ಮೊದಲು ಜೂ.7ರಂದು ಕಂಪೆನಿಯ ಮೊದಲ ಬಾಡಿಗೆ ವಿಮಾನವು ದಮಾಮ್‌ನಿಂದ 168 ಮಂದಿಯನ್ನು ಕರೆತಂದಿತ್ತು.

ಇಪ್ಪತ್ತು ವರ್ಷಗಳಿಂದ ಸೌದಿ ಅರೇಬಿಯಾದ ಜುಬೈಲ್ ಕೇಂದ್ರವಾಗಿರಿಸಿ ಕಾರ್ಯಾಚರಿಸುತ್ತಿರುವ ‘ಎಕ್ಸ್‌ಪರ್ಟೈಸ್’ ಹತ್ತು ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಬೃಹತ್ ಸಂಸ್ಥೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕೊರೋನಾ ಲಾಕ್‌ಡೌನ್ ನಿಂದ ಸೌದಿ ಅರೇಬಿಯಾದಲ್ಲಿ ಅತಂತ್ರರಾಗಿದ್ದ 170ಕನ್ನಡಿಗರನ್ನು ಎಕ್ಸ್‌ಪರ್ಟೈಸ್ ಸಂಸ್ಥೆಯ ಬಾಡಿಗೆ ವಿಮಾನವು ಮಂಗಳೂರಿಗೆ ಕರೆತಂದಿದೆ.

ಗುರುವಾರ ರಾತ್ರಿ ವಿಮಾನವು ತಾಯ್ನಾಡಿಗೆ ಬಂದಿತು. ಸಂಸ್ಥೆಯ ನಿರ್ದೇಶಕ ಅಶ್ರಫ್ ಕರ್ನಿರೆ ಅವರು ಈ ಬಗ್ಗೆ ವಿವರಗಳನ್ನು ನೀಡಿದ್ದಾರೆ.

ಈ ಮೊದಲು ಜೂ.7ರಂದು ಕಂಪೆನಿಯ ಮೊದಲ ಬಾಡಿಗೆ ವಿಮಾನವು ದಮಾಮ್‌ನಿಂದ 168 ಮಂದಿಯನ್ನು ಕರೆತಂದಿತ್ತು. ಅವರೆಲ್ಲರೂ ಸಂಸ್ಥೆಯ ಉದ್ಯೋಗಿಗಳಾಗಿದ್ದರು. ಈಗ ಬಂದಿರುವವರಲ್ಲಿ ಉದ್ಯೋಗಿಗಳೊಂದಿಗೆ ಇತರರೂ ಕೂಡ ಇದ್ದಾರೆ. ಸಂಸ್ಥೆಯ ಉದ್ಯೋಗಿಗಳಲ್ಲದ ಎಪ್ಪತ್ತು ಮಂದಿ ಈಗ ಬಂದಿರುವ ನೂರ ಎಪ್ಪತ್ತು ಮಂದಿಯಲ್ಲಿ ಸೇರಿದ್ದು, ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರಿಗೆ ಆದ್ಯತೆ ನೀಡಲಾಗಿದೆ.

ಈ ತನಕ ಎಕ್ಸ್‌ಪರ್ಟೈಸ್ ಸಂಸ್ಥೆಯ ಐದು ವಿಮಾನಗಳು ತಾಯ್ನಾಡಿಗೆ ಜನರನ್ನು ಕರೆತಂದಿದ್ದು, ಇನ್ನೂ ನಾಲ್ಕು ವಿಮಾನಗಳು ಬರಲಿವೆ ಎಂದು ಎಕ್ಸ್‌ಪರ್ಟೈಸ್ ಸಂಸ್ಥೆ ನಿರ್ದೇಶಕ ಅಶ್ರಫ್ ಕರ್ನಿರೆ ತಿಳಿಸಿದ್ದಾರೆ.

ಒಟ್ಟು ಹನ್ನೆರಡು ಚಾರ್ಟೆಡ್ ಫ್ಲೈಟ್‌ಗಳಲ್ಲಿ 2000ಮಂದಿ ಉದ್ಯೋಗಿಗಳನ್ನು ದಮಾಮ್‌ನಿಂದ ಭಾರತಕ್ಕೆ ತರುವ ಅತ್ಯಂತ ದೊಡ್ಡ ಯೋಜನೆಯನ್ನು ಎಕ್ಸ್‌ಪರ್ಟೈಸ್ ಸಂಸ್ಥೆ ಕಾರ್ಯಗತಗೊಳಿಸುತ್ತಿದೆ. ಇವರಲ್ಲಿ 1600ಮಂದಿ ಭಾರತೀಯರಾಗಿದ್ದಾರೆ. ಈಗಾಗಲೇ ಆರು ವಿಮಾನಗಳು ಭಾರತದ ಚೆನ್ನೈ, ಅಹ್ಮದಾಬಾದ್, ಮಂಗಳೂರು ನಗರಗಳಿಗೆ ಜನರನ್ನು ಕರೆತಂದಿವೆ.

ಸಂಸ್ಥೆಯ ನಿರ್ದೇಶಕ ಕೆ.ಎಸ್ ಶೇಖ್ ಅವರು ಈ ಬಗ್ಗೆ ವಿವರ ನೀಡಿದರು. ಇಪ್ಪತ್ತು ವರ್ಷಗಳಿಂದ ಗಲ್ಫ್ ದೇಶಗಳಲ್ಲಿ ಸೌದಿ ಅರೇಬಿಯಾದ ಜುಬೈಲ್ ಕೇಂದ್ರವಾಗಿರಿಸಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆ ಹತ್ತು ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಬೃಹತ್ ಸಂಸ್ಥೆಯಾಗಿದೆ.

Get real time updates directly on you device, subscribe now.