ದುಬೈಯಿಂದ ಭಟ್ಕಳ ನಾಗರಿಕರನ್ನು ಕರೆತರಲಿದೆ ಬಾಡಿಗೆ ವಿಮಾನ: ಅತಿಕುರ್ರಹ್ಮಾನ್ ಮುನೀರಿ

ಜೂನ್ 12ರಂದು ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ರಾತ್ರಿ 9ಗಂಟೆಗೆ ವಿಮಾನ ಹೊರಡಲಿದ್ದು, ಒಂಬತ್ತು ಮಕ್ಕಳನ್ನು ಒಳಗೊಂಡಂತೆ  175 ಮಂದಿ ಪ್ರಯಾಣಿಕರು ಇರುತ್ತಾರೆ.

ವಿಮಾನವು ಮಂಗಳೂರಿಗೆ ತಲುಪಿದ ಬಳಿಕ ಮಂಗಳೂರಿನಿಂದ ಭಟ್ಕಳಕ್ಕೆ ಕರೆದೊಯ್ಯುವ ಪ್ರಕ್ರಿಯೆಗಳ ಬಗ್ಗೆ ಭಟ್ಕಳದ ತಂಝೀಮ್ ಸಂಸ್ಥೆ ಸಂಪೂರ್ಣ ಸಹಕಾರ.

ಕರಾವಳಿ ಕರ್ನಾಟಕ ವರದಿ
ಭಟ್ಕಳ : ಲಾಕ್‌ಡೌನ್‌ನಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿರುವ ಭಟ್ಕಳದ ಜನರು ಜೂ.12ರಂದು ಮಂಗಳೂರಿಗೆ ಬಾಡಿಗೆ ವಿಮಾನದಲ್ಲಿ ಬರಲಿದ್ದಾರೆ. ಈ ಬಗ್ಗೆ ಭಾರತೀಯ ರಾಯಭಾರ ಕಚೇರಿ ಅನುಮತಿ ನೀಡಿದೆ ಎಂದು ಅನಿವಾಸಿ ಉದ್ಯಮಿ, ‘ನೂಹಾ ಜರ್ನರಲ್ ಟ್ರೆಡಿಂಗ್ ದುಬೈ’ ಚೇರ್ಮನ್ ಹಾಗೂ ಭಟ್ಕಳ ಮಜ್ಲಿಸೆ ಇಸ್ಲಾಹ್-ವ-ತಂಝೀಂ ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನೀರಿ ತಿಳಿಸಿದ್ದಾರೆ.

ಜೂನ್ 12ರಂದು ರಾಸ್- ಅಲ್ -ಖೈಮಾ ವಿಮಾನ ನಿಲ್ದಾಣದಿಂದ ರಾತ್ರಿ 9ಗಂಟೆಗೆ ವಿಮಾನ ಹೊರಡಲಿದ್ದು, ಒಂಬತ್ತು ಮಕ್ಕಳನ್ನು ಒಳಗೊಂಡಂತೆ  175 ಮಂದಿ ಪ್ರಯಾಣಿಕರು ಇರುತ್ತಾರೆ. ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು  ವಿಸಿಟ್ ವೀಸಾದಲ್ಲಿ ದುಬೈಗೆ ಬಂದು ಲಾಕ್‍ಡೌನ್‍ನಲ್ಲಿ ಸಿಲುಕಿರುವವರಿಗೆ ಆದ್ಯತೆ ನೀಡಲಾಗಿದೆ.

ವಿಮಾನವು ಮಂಗಳೂರಿಗೆ ತಲುಪಿದ ಬಳಿಕ ಮಂಗಳೂರಿನಿಂದ ಭಟ್ಕಳಕ್ಕೆ  ಕರೆದೊಯ್ಯುವ ಪ್ರಕ್ರಿಯೆಗಳ ಬಗ್ಗೆ ಭಟ್ಕಳದ ತಂಝೀಮ್ ಸಂಸ್ಥೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುನೀರಿ ದುಬೈಯಿಂದ ನೀಡಿದ ವಾಟ್ಸ್ಯಾಪ್ ಸಂದೇಶದಲ್ಲಿ ವಿವರಿಸಿದ್ದು, ಭಟ್ಕಲ್ ಜಮಾಅತುಲ್ ಮುಸ್ಲೀಮೀನ್ ಮಂಗಳೂರು ಕೂಡ ಎಲ್ಲ ಸಹಕಾರವನ್ನು ನೀಡುವ ಭರವಸೆ ನೀಡಿದೆ.

ದುಬೈಯಲ್ಲಿರುವ ಭಟ್ಕಳದ ಅನೇಕ ನಾಗರಿಕ ಮುಂದಾಳುಗಳು,  ಮಂಕಿ ಮುಸ್ಲಿಂ ಜಮಾಅತ್ ದುಬೈಅಧ್ಯಕ್ಷ ಅಬು ಮುಹಮ್ಮದ್ ಮುಖ್ತಾಸರ್ ಮತ್ತು ಅನೇಕ ಭಟ್ಕಳದ ಯುವಕರು ಈ ಕಾರ್ಯವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.  ದಾನಿಗಳಿಗೆ ಭಗವಂತ ಉತ್ತಮ ಪ್ರತಿಫಲ ನೀಡಲಿ ಎಂದು ಪ್ರಾರ್ಥಿಸಿದ್ದು ಎಲ್ಲರಿಗೂ ಕೃತಜ್ಞತೆ ಎಂದು ಮುನೀರಿ ತಿಳಿಸಿದ್ದಾರೆ.

 

Get real time updates directly on you device, subscribe now.