ಕೊರೋನಾ ಸೋಂಕಿತ ನಾಲ್ಕು ತಿಂಗಳ ಮಗು ಗುಣಮುಖ

ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ತಿಂಗಳ ಮಗು ಗುಣಮುಖವಾಗಿದೆ.

ಕರಾವಳಿ ಕರ್ನಾಟಕ ವರದಿ
ವಿಶಾಖಪಟ್ಟಣ: ಕೋವಿಡ್19 ಸೋಂಕಿನಿಂದ ಹದಿನೆಂಟು ದಿನಗಳಿಂದ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ತಿಂಗಳ ಮಗು ಗುಣಮುಖವಾಗಿದೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಬುಡಕಟ್ಟು ಮಹಿಳೆ ಲಕ್ಷ್ಮಿ ಕೊರೋನಾ ಸೋಂಕಿತರಾಗಿದ್ದು, ಸೋಂಕು ಮಗುವಿಗೆ ಹರಡಿತ್ತು.

ವಿಶಾಖಪಟ್ಟಣದ ವಿಮ್ಸ್ ಆಸ್ಪತ್ರೆಯಿಂದ ಗುಣಮುಖಗೊಂಡ ಮಗುವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನಯ್ ಚಂದ್ ತಿಳಿಸಿದ್ದಾರೆ.

ವಿಶಾಖಪಟ್ಟಣದಲ್ಲಿ 252 ಮಂದಿ ಕೊರೋನಾ ಸೋಂಕಿತರಾಗಿದ್ದಾರೆ.

Get real time updates directly on you device, subscribe now.