ವಿಮಾನ, ರೈಲು ಪ್ರಯಾಣಕ್ಕೆ ‘ಆರೋಗ್ಯಸೇತು’ ಕಡ್ಡಾಯವಲ್ಲ: ಕೇಂದ್ರ ಸರಕಾರ

ಅಡಿಷನಲ್ ಸಾಲಿಸಿಟರ್ ಜನರಲ್ ಎಂ.ಎನ್.ನರಗುಂದ್ ಅವರು ಆರೋಗ್ಯಸೇತು ಅಳವಡಿಸಬಹುದು ಎಂಬುದು ಸಲಹೆಯಾಗಿದೆ ಅಷ್ಟೇ ಎಂದು ತಿಳಿಸಿದರು.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ವಿಮಾನ ಮತ್ತು ರೈಲು ಪ್ರಯಾಣಕ್ಕೆ ಆರೋಗ್ಯಸೇತು ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರಕಾರವು ರಾಜ್ಯ ಹೈಕೋರ್ಟ್‌ಗೆ ಹೇಳಿದೆ. ಅಡಿಷನಲ್ ಸಾಲಿಸಿಟರ್ ಜನರಲ್ ಎಂ.ಎನ್.ನರಗುಂದ್ ಅವರು ಆರೋಗ್ಯಸೇತು ಅಳವಡಿಸಬಹುದು ಎಂಬುದು ಸಲಹೆಯಾಗಿದೆ ಅಷ್ಟೇ ಎಂದು ತಿಳಿಸಿದರು.

ಆರೋಗ್ಯಸೇತು ಡೌನ್‌ಲೋಡ್ ಸಂಬಂಧ ನೀಡಿರುವ ಮಾರ್ಗಸೂಚಿ ಸಲಹೆ ಸ್ವರೂಪದ್ದಾಗಿದ್ದು, ಅದನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಐಚ್ಛಿಕ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಆರೋಗ್ಯಸೇತು ಹೊಂದಿಲ್ಲದ ಪ್ರಯಾಣಿಕರು ಸ್ವಯಂ ದೃಢೀಕರಣ ನಮೂನೆ ಅರ್ಜಿ ಭರ್ತಿ ಮಾಡಿ ಪ್ರಯಾಣ ಮಾಡಬಹುದೆಂಬ ಪರಿಷ್ಕೃತ ಮಾರ್ಗಸೂಚಿಯನ್ನು ನ್ಯಾಯಾಲಯಕ್ಕೆ ನೀಡಿದ್ದನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಪರಿಗಣಿಸಿತು. ಕೇಂದ್ರದ ಮಾರ್ಗಸೂಚಿಯ ಕಾನೂನಾತ್ಮಕ ಅಂಶಗಳನ್ನು ಪ್ರಶ್ನಿಸಿ ಈ  ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಜುಲೈ10ಕ್ಕೆ ಮುಂದೂಡಲಾಗಿದೆ.

ಆರೋಗ್ಯಸೇತು ಖಾಸಗಿತನದ ಹಕ್ಕು ಮತ್ತು ಮೂಲಭೂತಗಳನ್ನು ಉಲ್ಲಂಘಿಸುತ್ತದೆ. ಅದನ್ನು ಕಡ್ಡಾಯಪಡಿಸುವ ಕಾನೂನು ಇಲ್ಲ ಎಂದು ಬೆಂಗಳೂರಿನ ಅನಿವರ್ ಎ. ಅರವಿಂದ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಕಾನೂನು ಆದೇಶ ಇಲ್ಲದೇ ಆರೋಗ್ಯಸೇತು ಕಡ್ಡಾಯಗೊಳಿಸಲಾಗದು ಎಂಬ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಾಗಿದೆ.

Get real time updates directly on you device, subscribe now.