ಕೋಕಾ ಕೋಲಾ ನಿಷೇಧಕ್ಕಾಗಿ ಪಿಐಎಲ್: ಅರ್ಜಿದಾರನಿಗೆ 5ಲಕ್ಷ ರೂ ದಂಡ ವಿಧಿಸಿದ ಕೋರ್ಟ್
ಸಾಮಾಜಿಕ ಕಾರ್ಯಕರ್ತ ಉಮೆದ್ಸಿನ್ ಪಿ. ಚಾವ್ಲಾ ನ್ಯಾಯಾಲಯದ ಸಮಯ ಹಾಳು ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾ. ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯನ್ನು ತಿರಸ್ಕರಿಸಿದೆ.
ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಕೋಕಾ ಕೋಲಾ, ಥಮ್ಸ್ ಅಪ್ ಮುಂತಾದ ತಂಪು ಪಾನೀಯಗಳನ್ನು ನಿಷೇಧಿಸಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರನಿಗೆ ಐದು ಲಕ್ಷ ರೂ. ದಂಡ ವಿಧಿಸಿ, ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ. ಒಂದು ತಿಂಗಳ ಒಳಗೆ ದಂಡ ಪಾವತಿಸಬೇಕು ಎಂದು ಆದೇಶಿಸಿದೆ.
ಸಾಮಾಜಿಕ ಕಾರ್ಯಕರ್ತ ಉಮೆದ್ಸಿನ್ ಪಿ. ಚಾವ್ಲಾ ನ್ಯಾಯಾಲಯದ ಸಮಯ ಹಾಳು ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾ. ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯನ್ನು ತಿರಸ್ಕರಿಸಿದೆ.
ಈ ತಂಪು ಪಾನೀಯಗಳನ್ನು ನಿಷೇಧಿಸಬೇಕು ಎಂಬ ಅರ್ಜಿದಾರ ಯಾವುದೋ ಉದ್ದೇಶ ಇರಿಸಿಕೊಂಡು ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಪೀಠ ಹೇಳಿತು. ಅರ್ಜಿದಾರರ ಪರ ವಕೀಲರು ಸಮರ್ಥ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಸುಪ್ರೀಂ ಪೀಠ ಹೇಳಿತು.
ನಿಷೇಧಿಸಬೇಕು ಎನ್ನುವ ಅರ್ಜಿದಾರನಿಗೆ ಯಾಕೆ ನಿಷೇಧಿಸಬೇಕು ಎಂದು ಪೂರಕ ಮಾಹಿತಿ ಸಮರ್ಪಕವಾಗಿ ತಿಳಿದಿಲ್ಲ ಎಂಬ ಬಗ್ಗೆ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತು.