ಕಾರ್ಕಳ ಯುವತಿಯ ಕವರ್ ಡ್ರೈವ್ ಶಾಟ್‌ಗೆ ಇಎಸ್ಪಿಎನ್ ಫಿದಾ
ಯುವತಿಯೋರ್ವರು ಮನೆ ಅಂಗಳದಲ್ಲಿ ಕ್ರಿಕೆಟ್ ಆಡುವ ಸಂದರ್ಭದ ಕವರ್ ಡ್ರೈವ್ ಶಾಟ್ ಅನ್ನು ಇಎಸ್ಪಿಎನ್ ಕ್ರಿಕ್ಇನ್ಫೋ ಟ್ವಿಟರ್ ಪುಟದಲ್ಲಿ ಹಾಕಿದ್ದು, ಭಾರೀ ಜನಪ್ರಿಯವಾಗಿದೆ.
ಕರಾವಳಿ ಕರ್ನಾಟಕ ವರದಿ
ಕಾರ್ಕಳ: ಇಲ್ಲಿನ ಯುವತಿಯೋರ್ವರು ಮನೆ ಅಂಗಳದಲ್ಲಿ ಕ್ರಿಕೆಟ್ ಆಡುವ ಸಂದರ್ಭದ ಕವರ್ ಡ್ರೈವ್ ಶಾಟ್ ಅನ್ನು ಇಎಸ್ಪಿಎನ್ ಕ್ರಿಕ್ಇನ್ಫೋ ಟ್ವಿಟರ್ ಪುಟದಲ್ಲಿ ಹಾಕಿದ್ದು, ಭಾರೀ ಜನಪ್ರಿಯವಾಗಿದೆ.
ಕಾರ್ಕಳದ ಜ್ಯೋತಿ ಪೂಜಾರಿ ಅವರು ಮನೆಯ ಸದಸ್ಯರೊಂದಿಗೆ ಕ್ರಿಕೆಟ್ ಆಡುವ ಸಂದರ್ಭ ರಂಜಿತ್ ಪೂಜಾರಿ ಫೇಸ್ಬುಕ್ನಲ್ಲಿ ಹಾಕಿದ್ದ ವಿಡೀಯೋವನ್ನು ಟ್ವೀಟ್ ಮಾಡಲಾಗಿದ್ದು, ಅನೇಕ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.
ವಿಡಿಯೋ ವೀಕ್ಷಣೆಗಾಗಿ https://twitter.com/ESPNcricinfo
ಕಾರ್ಕಳ ಕೆರ್ವಾಶೆಯ ಯುವತಿ ಮುಂಬಯಿಯಲ್ಲಿ ನೆಲೆಸಿದ್ದು, ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದಾರೆ. ಬಿಡುವಿನ ವೇಳೆ ಕ್ರಿಕೆಟ್ ಆಡುವುದು ಅವರ ನೆಚ್ಚಿನ ಹವ್ಯಾಸ. ರಂಜಿತ್ ಪೂಜಾರಿ ಅವರು ಆಡುವ ಸಂದರ್ಭ ಮಾಡಿದ ವಿಡೀಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ಕ್ರಿಕೆಟ್ ಖ್ಯಾತನಾಮರ ಜೊತೆ ತನ್ನ ಆಟದ ಶೈಲಿ ಹೋಲಿಸುತ್ತಿರುವುದು ಅವರು ನಿರೀಕ್ಷಿಸಿರಲಿಲ್ಲ. ಜ್ಯೋತಿಯವರಿಗೆ ಇದು ಖುಶಿಕೊಟ್ಟಿದೆ. ಧೋನಿ ಜ್ಯೋತಿಯವರ ಅಚ್ಚುಮೆಚ್ಚಿನ ಕ್ರಿಕೆಟ್ ಆಟಗಾರರಾಗಿದ್ದಾರೆ.