ಕುವೈಟ್: ರಿಫೈನರಿಯಲ್ಲಿ ಬೆಂಕಿ ಆಕಸ್ಮಿಕ, ಮಂಗಳೂರು ಯುವಕ ಮೃತ್ಯು

ಘಟನೆ ಬಳಿಕ ಕಾರ್ಮಿಕರ ರಕ್ಷಣೆ ಬಗ್ಗೆ ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮ ಅಳವಡಿಸುವಂತೆ KOC ಕ್ರಮ ಕೈಗೊಂಡಿದೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕುವೈಟ್‌ನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕವೊಂದರಲ್ಲಿ ಮಂಗಳೂರಿನ ಪಡೀಲ್‌ನ ಯುವಕನೋರ್ವ ಸಾವಪ್ಪಿದ ಬಗ್ಗೆ ಕುವೈಟ್ ಆಯಿಲ್ ಕಂಪೆನಿ ಮೂಲಗಳು ತಿಳಿಸಿವೆ. ಮೃತರನ್ನು ಪಡೀಲ್‌-ಕೊಡಕ್ಕಲ್‌ ನಿವಾಸಿ ಸತೀಶ್ ಕೋಚು ಶೆಟ್ಟಿ(47) ಎಂದು ಗುರುತಿಸಲಾಗಿದೆ.

ಜೂ. 11ರಂದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಂದರ್ಭ ಅನಿಲ ಬಿಡುಗಡೆಯಾಗಿ ಸ್ಥಾವರದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ತೀವ್ರ ಗಾಯಗೊಂಡ ಸತೀಶ್‌ ಕೋಚು ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೂರು ದಿನ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ ಸತೀಶ್ ಅವರು ಆದಿತ್ಯವಾರ ನಿಧನ ಹೊಂದಿದ್ದಾರೆ. ಸತೀಶ್ ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ಎಂಟು ವರ್ಷಗಳಿಂದ ಕುವೈಟ್‌ನಲ್ಲಿ ಉದ್ಯೋಗಿಯಾಗಿದ್ದರು.

ಅಲ್-ಸಬ್ರಿಯಾ ರಿಫೈನರಿಯ ಡ್ರಿಲ್ಲಿಂಗ್ ಕಾರ್ಯಾಚರಣೆ ಸಂದರ್ಭ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಈ ಘಟನೆ ಬಳಿಕ ಕಾರ್ಮಿಕರ ರಕ್ಷಣೆ ಬಗ್ಗೆ ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮ ಅಳವಡಿಸುವಂತೆ KOC ಕ್ರಮ ಕೈಗೊಂಡಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಅಗ್ನಿ ಆಕಸ್ಮಿಕ ಸಂದರ್ಭ ಇನ್ನೋರ್ವ ಕಾರ್ಮಿಕ ಕೂಡ ಗಾಯಗೊಂಡಿದ್ದರು.

 

Get real time updates directly on you device, subscribe now.