ಪಡುಕೋಣೆ: ನಿವೃತ್ತ ಶಿಕ್ಷಕಿ ಪಾವ್ಲಿನ್ ಫೆರ್ನಾಂಡಿಸ್ ನಿಧನ

ಪಡುಕೋಣೆಯ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಪಾವ್ಲಿನ್ ಫೆರ್ನಾಂಡಿಸ್ ಅವರು ಆ ಭಾಗದ ಹಲವರಿಗೆ ಅಕ್ಷರದ ಅರಿವು ಮೂಡಿಸಿದ ಅಧ್ಯಾಪಕಿ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಪಡುಕೋಣೆಯ ನಿವೃತ್ತ ಶಿಕ್ಷಕಿ ಪಾವ್ಲಿನ್ ಫೆರ್ನಾಂಡಿಸ್(84) ಅವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರ ಅಂತ್ಯಕ್ರಿಯೆ ವಿಧಿಗಳು ಪಡುಕೋಣೆ ಸಂತ ಅಂತೋನಿ ಚರ್ಚ್‌ನಲ್ಲಿ ಸಂಜೆ 4ಗಂಟೆಗೆ ನಡೆಯಲಿವೆ.

ಪಡುಕೋಣೆಯ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಪಾವ್ಲಿನ್ ಫೆರ್ನಾಂಡಿಸ್ ಅವರು ‘ನಮಗೆಲ್ಲ ಅಕ್ಷರದ ಅರಿವು ಮೂಡಿಸಿದ ಅಧ್ಯಾಪಕಿ’ ಎಂದು ಅವರ ಹಳೆ ವಿದ್ಯಾರ್ಥಿ ಸುಬ್ರಹ್ಮಣ್ಯ ಪಡುಕೋಣೆ ಆಚಾರ್ ಪಡುಕೋಣೆ ತಿಳಿಸಿದ್ದಾರೆ.

ಹಳೆ ವಿದ್ಯಾರ್ಥಿ ಬಳಗ ಸನ್ಮಾನಿಸಿದ ಸಂದರ್ಭದ ಚಿತ್ರ

ಇತ್ತೀಚೆಗಷ್ಟೇ ಅವರ ಸೇವೆಯನ್ನು ಸ್ಮರಿಸಿ ಅವರ ಮನೆಗೆ ತೆರಳಿ ಹಳೆ ವಿದ್ಯಾರ್ಥಿ ಬಳಗ ಮತ್ತು ಪಡುಕೋಣೆ ಸರಕಾರಿ ಅಧ್ಯಾಪಕ ವೃಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದ್ದರು.

ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ಹಣದ ನೆರವು

ನಾವುಂದ, ಶಿರೂರುಗಳಲ್ಲಿಯೂ ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು, ಶಿಕ್ಷಣ ವಂಚಿತ ವಿದ್ಯಾರ್ಥಿಗಳನ್ನು ಹುಡುಕಿ ಅವರ ವಿದ್ಯಾಭ್ಯಾಸಕ್ಕೆ ವಯಕ್ತಿಕ ಹಣದ ನೆರವು ನೀಡಿದ್ದನ್ನು ಜನರು ಸ್ಮರಿಸಿಕೊಳ್ಳುತ್ತಾರೆ.

ಪಡುಕೋಣೆ ಚರ್ಚ್ ಪಾಲನಾ ಮಂಡಳಿ ಸದಸ್ಯರಾಗಿದ್ದ ಪಾವ್ಲಿನ್ ಅವರು ಎಸ್‌ವಿಪಿ ಕಾರ್ಯದರ್ಶಿಯಾಗಿ ಸೇವೆ ನೀಡಿದ್ದರು. ವಿದ್ಯಾರ್ಥಿಗಳು ಶಾಲೆ ಬಿಟ್ಟ ಬಳಿಕವೂ ಅವರು ತಮ್ಮ ಭವಿಷ್ಯಕ್ಕಾಗಿ ಏನು ಮಾಡುತ್ತಿದ್ದಾರೆ ಎಂದು ವಿಚಾರಿಸಿ ತಿಳಿದುಕೊಳ್ಳುತ್ತಿದ್ದ ಪಾವ್ನಿನ್ ಫೆರ್ನಾಂಡಿಸ್ ಅವರು ಪಡುಕೋಣೆ-ನಾವುಂದ ಪರಿಸರದಲ್ಲಿ ಜನರ ವಿಶೇಷ ಅಭಿಮಾನಕ್ಕೆ ಪಾತ್ರರಾಗಿದ್ದರು.

Get real time updates directly on you device, subscribe now.