ಅಧಿಕಾರಿಗೆ ಚಪ್ಪಲಿಯಿಂದ ಥಳಿಸಿದ ಬಿಜೆಪಿ ನಾಯಕಿ ಬಂಧನ

ಟಿಕ್ ಟಾಕ್ ಸ್ಟಾರ್, ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಕೆನ್ನೆಗೆ ಥಳಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿತ್ತು.

ನಿಮಗೆ ಮಾತ್ರ ಜೀವಿಸುವ ಅಧಿಕಾರ ಇರುವುದೇ? ನಿಮಗೆ ತಾಯಿ ಇಲ್ಲವೇ? ಸಹೋದರಿ ಇಲ್ಲವೆ? ನಮ್ಮನ್ನು ಅವಮಾನಿಸಲು ಎಷ್ಟು ಧೈರ್ಯ ಎಂದು ನಿಂದಿಸುತ್ತಾ ಹಲ್ಲೆಗೈಯುವ ಸಂದರ್ಭ ಅವಾಚ್ಯ ಶಬ್ದಗಳನ್ನೂ ಈಕೆ ಬಳಸಿದ್ದರು.

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ತನ್ನನ್ನು ಅವಮಾನಿಸಿದ್ದಾನೆ ಎಂದು ಆರೋಪಿಸಿ ಟಿಕ್ ಟಾಕ್ ಸ್ಟಾರ್, ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಕೆನ್ನೆಗೆ ಥಳಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ರೈತರ ದೂರಿನ ಅನ್ವಯ ಹಿಸಾರ್ ಬಲ್ಸಮಂದ್ ಮಾರುಕಟ್ಟೆ ಕಾರ್ಯದರ್ಶಿ ಸುಲ್ತಾನ್ ಸಿಂಗ್ ಎಂಬವರನ್ನು ವಿಚಾರಿಸಲು ತೆರಳಿದ ಸಂದರ್ಭ ಸೂಕ್ತ ಉತ್ತರ ನೀಡಿಲ್ಲ, ತನ್ನನ್ನು ನಿಂದಿಸಿದ್ದಾರೆ ಎಂದು ಸೋನಾಲಿ ಚಪ್ಪಲಿ ಏಟು ನೀಡಿದ್ದರು.  ಥಳಿಸಿದ ಬಳಿಕ ಅಧಿಕಾರಿ ವಿರುದ್ಧವೇ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ಈಕೆಯ ವಿರುದ್ಧ ಆಕ್ರೋಶ ವ್ಯಾಪಕವಾಗಿತ್ತು.

ನಿಮಗೆ ಮಾತ್ರ ಜೀವಿಸುವ ಅಧಿಕಾರ ಇರುವುದೇ? ನಿಮಗೆ ತಾಯಿ ಇಲ್ಲವೇ? ಸಹೋದರಿ ಇಲ್ಲವೆ? ನಮ್ಮನ್ನು ಅವಮಾನಿಸಲು ಎಷ್ಟು ಧೈರ್ಯ ಎಂದು ನಿಂದಿಸುತ್ತಾ ಹಲ್ಲೆಗೈಯುವ ಸಂದರ್ಭ ಅವಾಚ್ಯ ಶಬ್ದಗಳನ್ನೂ ಈಕೆ ಬಳಸಿದ್ದರು.

ಹರ್ಯಾಣ ವಿದಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸೋನಾಲಿ ಸೋತಿದ್ದರು ಆಗ ಅಧಿಕಾರಿ ತನ್ನನ್ನು ವಿರೋಧಿಸಿದ್ದಾರೆ ಎಂಬ ಬಗ್ಗೆ ಸೋನಾಲಿ ತಪ್ಪು ಮಾಹಿತಿ ಹೊಂದಿದ್ದರು. ಈ ಬಗ್ಗೆ ಅಧಿಕಾರಿ ಅವರಿಗೆ ಮನದಟ್ಟು ಮಾಡಲು ಯತ್ನಿಸಿದ್ದರು. ಜನರಿಗಾದ ಸಮಸ್ಯೆ ಏನು? ಮತ್ತು ಸಮಸ್ಯೆಯ  ಬಗ್ಗೆ ಪರಿಶೀಲಿಸುವುದಾಗಿಯೂ, ಹೊಡೆಯಬಾರದಾಗಿ ವಿನಂತಿಸಿಕೊಳ್ಳುತ್ತಿದ್ದರೂ ಈಕೆ ಅಮಾನವೀಯವಾಗಿ ಥಳಿಸಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಸೋನಾಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಸಾರ್ ಜಿಲ್ಲೆಯ ಆದಂಪುರದಿಂದ ಸ್ಪರ್ಧಿಸಿ ಸೋಲುಂಡಿದ್ದರು.

Get real time updates directly on you device, subscribe now.