ದೋಹಾ: ಕತರ್‌ನಿಂದ ಮಂಗಳೂರು ತಲುಪಿದ ಪ್ರಥಮ ವಿಮಾನ

ಕತರ್ ಬಂಟ್ಸ್ ಸಂಘದ ಅಧ್ಯಕ್ಷ ದೀಪಕ್ ಶೆಟ್ಟಿಯವರು ಈ ಬಗ್ಗೆ ಮುತುವರ್ಜಿ ವಹಿಸಿದ್ದರು.

ಮಂಗಳೂರು ತಲುಪಿದವರಿಗೆ ದೀಪಾವಳಿ, ಕ್ರಿಸ್ಮಸ್, ಈದ್ ಹಬ್ಬ ಆಚರಿಸಿದಷ್ಟೇ ಸಂಭ್ರಮವಾಗಿದೆ ಎಂದು ಕತರ್ ಬಂಟ್ಸ್ ಸಂಘದ ಅಧ್ಯಕ್ಷ ದೀಪಕ್ ಶೆಟ್ಟಿ ತಿಳಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ದೋಹಾ: ಕೊರೊನಾ ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿರುವ ಕತರ್‌ನಲ್ಲಿರುವ ಅನಿವಾಸಿ ಭಾರತೀಯರಲ್ಲಿ 185ಕನ್ನಡಿಗರು ಶುಕ್ರವಾರ ಸಂಜೆ ‘ವಂದೇ ಭಾರತ್’ ಮಿಷನ್ ಅಡಿ ಮಂಗಳೂರು ತಲುಪಿದ್ದಾರೆ. ಕತರ್‌ನಿಂದ ಮೊದಲ ಬಾರಿ ಕನ್ನಡಿಗರನ್ನು ಹೊತ್ತ ವಿಮಾನ ತಾಯ್ನಾಡನ್ನು ತಲುಪಿದೆ.

ದೋಹಾದಿಂದ ಮಧ್ಯಾಹ್ನ12:25(ಭಾರತೀಯ ಕಾಲಮಾನ2:55) ಕ್ಕೆ ಹೊರಟ ವಿಮಾನ ಮಂಗಳೂರು ನಿಲ್ದಾಣವನ್ನು ಸಂಜೆ 7:50ಕ್ಕೆ ತಲುಪಿತು.

ಕತರ್ ಬಂಟ್ಸ್ ಸಂಘದ ಅಧ್ಯಕ್ಷ ದೀಪಕ್ ಶೆಟ್ಟಿಯವರು ಈ ಬಗ್ಗೆ ಮುತುವರ್ಜಿ ವಹಿಸಿದ್ದರು.

ಪ್ರಯಾಣಿಕರ ಪಟ್ಟಿ ತಯಾರಿಸುವಲ್ಲಿ ವಂದೇ ಭಾರತ್ ದೋಹಾ ಕರ್ನಾಟಕ ಸಮಿತಿ ಸದಸ್ಯರಾದ ನಾಗೇಶ್ ರಾವ್, ಶಶಿಧರ್ ಹೆಬ್ಬಾಳ್, ಖಲೀಲ್, ಸಂದೀಪ್ ರೆಡ್ಡಿ ಮುಂತಾದವರ ಶ್ರಮ ಕೂಡ ಸಾಕಷ್ಟು ಇದೆ ಎಂದು ಅವರು ಹೇಳಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಕಾದು ಮಂಗಳೂರು ತಲುಪಿದವರಿಗೆ ದೀಪಾವಳಿ, ಕ್ರಿಸ್ಮಸ್, ಈದ್ ಹಬ್ಬ ಆಚರಿಸಿದಷ್ಟೇ ಸಂಭ್ರಮವಾಗಿದೆ ಎಂದವರು ತಿಳಿಸಿದ್ದಾರೆ.

Get real time updates directly on you device, subscribe now.