ಅಬುಧಾಭಿಯಲ್ಲಿ ಮೃತಪಟ್ಟ ಅಡ್ಡೂರಿನ ಯುವಕನ ಅಂತ್ಯಕ್ರಿಯೆ

ಅನಿವಾಸಿ ಉದ್ಯಮಿ ಹಿದಾಯತ್ ಅಡ್ಡೂರ್ ಅವರು ಮೃತರ ಮನೆ ಪತ್ತೆಹಚ್ಚಿ ಈ ಬಗ್ಗೆ ಮುತುವರ್ಜಿ ವಹಿಸಿದ್ದ ಹಿನ್ನೆಲೆಯಲ್ಲಿ ಶನಿವಾರ ದುಬೈಯಿಂದ ವಿಮಾನದಲ್ಲಿ ಮೃತದೇಹ ಬಂದಿತ್ತು.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಅಬುಧಾಭಿಯಲ್ಲಿ ಎರಡು ವಾರಗಳ ಹಿಂದೆ ಮೃತಪಟ್ಟ ಅಡ್ಡೂರಿನ ಪುಣಿಕೋಡಿಯ ಯುವಕ ಯಶವಂತ ಪೂಜಾರಿ(37) ಅವರ ಅಂತ್ಯಕ್ರಿಯೆ ಬಡಕಬೈಲ್ ಸ್ಮಶಾನದಲ್ಲಿ ನಡೆಯಿತು. ಅಡ್ಡೂರಿನ ದಿ.ನಾರಾಯಣ ಪೂಜಾರಿ ಮತ್ತು ಲಲಿತಾ ಅವರ ಮಗ ಯಶವಂತ ಅವರು ಜೂ.5ರಂದು ಹೃದಯಾಘಾತದಿಂದ ಅಬುಧಾಭಿಯಲ್ಲಿ ಮೃತಪಟ್ಟಿದ್ದರು.

ಅನಿವಾಸಿ ಉದ್ಯಮಿ ಹಿದಾಯತ್ ಅಡ್ಡೂರ್ ಅವರು ಮೃತರ ಮನೆ ಪತ್ತೆಹಚ್ಚಿ ಈ ಬಗ್ಗೆ ಮುತುವರ್ಜಿ ವಹಿಸಿದ್ದ ಹಿನ್ನೆಲೆಯಲ್ಲಿ ಶನಿವಾರ ದುಬೈಯಿಂದ ವಿಮಾನದಲ್ಲಿ ಮೃತದೇಹ ಬಂದಿತ್ತು.

ಕಲ್ಲಿಕೋಟೆಯಿಂದ ಮೃತದೇಹವನ್ನು ಅಂಬುಲೆನ್ಸ್‌ನಲ್ಲಿ ತಂದು ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಆ ಬಳಿಕ ಬಡಕಬೈಲ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

ಯಶವಂತ ಅವರು ಮೂರು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಅಬುಧಾಬಿಗೆ ತೆರಳಿದ್ದರು. ಅವರು ಅಪಘಾತದಿಂದ ಸಾವಪ್ಪಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಅವರು ಹೃದಯಾಘಾತದಿಂದ ಸಾವಪ್ಪಿದ ಸಂಗತಿ ತಿಳಿದುಬಂತು.

Get real time updates directly on you device, subscribe now.