ತಂದೆಯಿಂದಲೆ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಬಾಲಕಿ

ಆರೋಪಿ ತಂದೆಗೆ ಆರು ಮಂದಿ ಹೆಣ್ಣು ಮಕ್ಕಳಿದ್ದು, ಅತ್ಯಾಚಾರ ಎಸಗಿದ ಬಾಲಕಿ ಕಿರಿಯ ಪುತ್ರಿ ಆಗಿದ್ದಾಳೆ.

ಮಗಳ ಮೇಲೆ ತಂದೆ ಅತ್ಯಾಚಾರಗೈಯುತ್ತಿದ್ದ ಸಂಗತಿ ವಿಶ್ವ ಅಪ್ಪಂದಿರ ದಿನಾಚರಣೆಯಂದೇ ಬೆಳಕಿಗೆ.

ಕರಾವಳಿ ಕರ್ನಾಟಕ ವರದಿ
ಕೊಪ್ಪಳ: ದನ ಮೇಯಿಸುವ ನೆಪದಲ್ಲಿ ಹದಿನಾಲ್ಕು ವರ್ಷದ ಅಪ್ರಾಪ್ತ ವಯಸ್ಸಿನ ಪುತ್ರಿಯನ್ನು ಕರೆದುಕೊಂಡು ಹೋಗಿ ತಂದೆಯೇ ಅತ್ಯಾಚಾರ ಎಸಗುತ್ತಿದ್ದ ಸಂಗತಿ ಭಾನುವಾರ ಬೆಳಕಿಗೆ ಬಂದಿದೆ.

ನಾಲ್ಕು ದಿನಗಳ ಹಿಂದೆ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಈ ಸಂದರ್ಭ ಆಸ್ಪತ್ರೆಯಲ್ಲಿ ಬಾಲಕಿ ಎಂಟು ತಿಂಗಳ ಗರ್ಭಿಣಿಯಾಗಿರುವ ಸಂಗತಿ ಗೊತ್ತಾಗಿದ್ದು, ಹೆರಿಗೆ ಮಾಡಿಸಲಾಗಿತ್ತು. ಗಂಡು ಮಗು ಜನಿಸಿತ್ತು. ಆ ಬಳಿಕ ತಾಯಿಗೆ ಮಗಳ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಎಸಗಿದ ಸಂಗತಿ ತಿಳಿದುಬಂದಿದೆ.

ಈ ಬಗ್ಗೆ ಸಂತ್ರಸ್ತ ಬಾಲಕಿಯ ತಾಯಿ, ತನ್ನ ಗಂಡನ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಒಂದು ವರ್ಷದಿಂದ ಮಗಳ ಮೇಲೆ ತಂದೆ ಅತ್ಯಾಚಾರಗೈಯುತ್ತಿದ್ದ ಸಂಗತಿ ವಿಶ್ವ ಅಪ್ಪಂದಿರ ದಿನಾಚರಣೆಯಂದೇ ಬೆಳಕಿಗೆ ಬಂದಿರುವುದಾಗಿದೆ. ಆರೋಪಿ ತಂದೆಗೆ ಆರು ಮಂದಿ ಹೆಣ್ಣು ಮಕ್ಕಳಿದ್ದು, ಅತ್ಯಾಚಾರ ಎಸಗಿದ ಬಾಲಕಿ ಕಿರಿಯ ಪುತ್ರಿ ಆಗಿದ್ದಾಳೆ.

Get real time updates directly on you device, subscribe now.