ಮಂಗಳೂರು: ಕೊರೋನಾ ಸೋಂಕಿತ ವೃದ್ಧ ಸಾವು

ದ.ಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿಂದ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

ಮೃತರು ಅಸ್ತಮಾ ಮತ್ತು ಮಧುಮೇಹದಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಜೂ.7ರಂದು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಎಪ್ಪತ್ತು ವರ್ಷದ ಹಿರಿಯ ನಾಗರಿಕರೋರ್ವರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ದ.ಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿಂದ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿರುವಾಗ ಇವರು ಜ್ವರ, ಕೆಮ್ಮಿನಿಂದ ಬಳಲಿದ್ದು, ವೈದ್ಯರಿಂದ ಔಷಧ ಪಡೆದಿದ್ದರು. ಜೂನ್ ಎರಡನೇ ವಾರ ಮಂಗಳೂರಿಗೆ ಬಂದಿದ್ದು, ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಜೂ.12ರಂದು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಂದು ಮಧ್ಯಾಹ್ನ ಸಾವಪ್ಪಿದ್ದಾರೆ.

ಮೃತರು ಅಸ್ತಮಾ ಮತ್ತು ಮಧುಮೇಹದಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.

Get real time updates directly on you device, subscribe now.