ಎಟಿಎಂಗೆ ಸ್ಕೀಮರ್ ಅಳವಡಿಸಿ ಹಣ ದೋಚಲು ಯತ್ನ: ಇಬ್ಬರು ವಿದೇಶಿಯರ ಬಂಧನ

ಯುನಿಯನ್ ಬ್ಯಾಂಕ್ ಗಂಗಾನಗರ ಶಾಖೆ ವ್ಯವಸ್ಥಾಪಕ ಶ್ರೀನಿವಾಸ ರೆಡ್ಡಿಯವರು ನೀಡಿದ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಎಟಿಎಂಗಳಿಗೆ ಸ್ಕೀಮರ್ ಯಂತ್ರ ಅಳವಡಿಸಿ ಬ್ಯಾಂಕ್ ಗ್ರಾಹಕರ ಡಾಟಾ ಕಳವುಗೈದು, ಹಣ ಲಪಟಾವಣೆಗೆ ಯತ್ನಿಸಿದ್ದ ಆರೋಪದಲ್ಲಿ ಇಬ್ಬರು ವಿದೇಶಿ ಪ್ರಜೆಗಳನ್ನು ಆರ್.ಟಿ.ನಗರ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಯಲಹಂಕ ಕೋಗಿಲು ಬಳಿ ನೆಲೆಸಿರುವ ಉಗಾಂಡ ಪ್ರಜೆ ಫೆಲಿಕ್ಸ್ ಕಿಸಿಬೊ(25) ಮತ್ತು ತಾಂಜೇನಿಯಾದ ಖೈರುನ್ ಅಬ್ದುಲ್ಲ(32) ಬಂಧಿತರು.

ಯುನಿಯನ್ ಬ್ಯಾಂಕ್ ಗಂಗಾನಗರ ಶಾಖೆ ವ್ಯವಸ್ಥಾಪಕ ಶ್ರೀನಿವಾಸ ರೆಡ್ಡಿಯವರು ನೀಡಿದ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಲಾಗಿದೆ. ಎಟಿಎಂ ಉಸ್ತುವಾರಿ ಉಮಾಮಹೇಶ್ವರ್ ಅವರು ನೀಡಿದ ಮಹತ್ವದ ಸುಳಿವು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ವಿವಿಧ ಬ್ಯಾಂಕ್‌ಗಳ ಹನ್ನೆರಡು ಎ‌ಟಿ‌ಎಂ ಕಾರ್ಡ್, ಸ್ಕೀಮರ್ ಮೆಷಿನ್, ಲೋಡರ್, ರಹಸ್ಯ ಕ್ಯಾಮರಾ, ಲ್ಯಾಪ್‌ಟಾಪ್, ಮೂರು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಸಿಸಿ ಕ್ಯಾಮರಾಗಳಲ್ಲಿ ಇವರ ಕೃತ್ಯ ಸೆರೆಯಾಗಿತ್ತು. ಸೈಬರ್ ಕಾಯ್ದೆ ಮತ್ತು ವಂಚನೆ ಪ್ರಕರಣ ಅನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Get real time updates directly on you device, subscribe now.