ದುಬೈ: ಅನಿವಾಸಿ ಭಾರತೀಯ ಉದ್ಯಮಿ ದಂಪತಿ ಹತ್ಯೆ, ಓರ್ವ ಸೆರೆ

ಆರೋಪಿ ತಡೆಯಲು ಬಂದ ಮೃತ ದಂಪತಿಗಳ ಹದಿನೆಂಟರ ಹರಯದ ಪುತ್ರಿಗೂ ಇರಿದಿದ್ದರೂ ಆಕೆ ಅಪಾಯದಿಂದ ಪಾರಾಗಿದ್ದಾರೆ.

ಕರಾವಳಿ ಕರ್ನಾಟಕವರದಿ
ದುಬೈ: ಅರೇಬಿಯನ್ ರ್ಯಾಂಚಸ್‌ಗಳಿರುವ ಪ್ರದೇಶದಲ್ಲಿ ಅನಿವಾಸಿ ಭಾರತೀಯ ದಂಪತಿಯನ್ನು ಇರಿದು ಕೊಲೆಗೈದ ಪಾಕಿಸ್ತಾನ ಮೂಲದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯ ಬಗ್ಗೆ ದಂಪತಿಗಳ ಪುತ್ರಿ ದುಬೈ ಪೊಲೀಸ್ ಕಮಾಂಡ್ ರೂಗೆ ಕರೆ ಮಾಡಿ ವಿಷಯ ತಿಳಿಸಿದ ಬೆನ್ನಲ್ಲೇ ದುಬೈ ಪೊಲೀಸ್ ಕ್ರಿಮಿನಲ್ ವಿಭಾಗದ ನಿರ್ದೇಶಕ ಬ್ರಿಗೇಡಿಯರ್ ಜಮಾಲ್ ಅಲ್ ಜಲ್ಲಾಫ್ ಅವರು ತನಿಖೆಗೆ ಆದೇಶಿಸಿದ್ದರು.

ಮೃತ ಉದ್ಯಮಿ ಸಂಸ್ಥೆಯೊಂದರ ವ್ಯವಸ್ಥಾಪಕರಾಗಿದ್ದರು. ಮೃತರನ್ನು ಹಿರೇನ್ ಆದಿತ್ಯ ಮತ್ತು ವಿಧಿ ಆದಿತ್ಯ ಎಂದು ಭಾರತೀಯ ರಾಯಭಾರ ಕಚೇರಿ ಗುರುತಿಸಿದೆ. ಇಬ್ಬರು ಪುತ್ರಿಯರನ್ನು ದಂಪತಿ ಅಗಲಿದ್ದಾರೆ.

ಮನೆಮಂದಿ ನಿದ್ರಿಸುತ್ತಿದ್ದಾಗ ನುಗ್ಗಿದ್ದ ಕೊಲೆಗಾರ ಬೆಲೆಬಾಳುವ ವಸ್ತುಗಳನ್ನು ಕದಿಯಲು ಬಯಸಿದ್ದ. ಈ ಸಂದರ್ಭ ಬೆಡ್ ರೂಂ ಪ್ರವೇಶಿಸಿದಾಗ ದಂಪತಿ ಎಚ್ಚರಗೊಂಡು ಆಕ್ಷೇಪಿಸಿದಾಗ ಅವರನ್ನು ಇರಿದು ಕೊಲೆಗೈದಿರುವುದಾಗಿ ಪೊಲೀಸ್ ತನಿಖೆ ಸಂದರ್ಭ ಆರೋಪಿ ಹೇಳಿದ್ದಾನೆ.

ಆರೋಪಿ ತಡೆಯಲು ಬಂದ ಮೃತ ದಂಪತಿಗಳ ಹದಿನೆಂಟರ ಹರಯದ ಪುತ್ರಿಗೂ ಇರಿದಿದ್ದರೂ ಆಕೆ ಅಪಾಯದಿಂದ ಪಾರಾಗಿದ್ದಾರೆ.

Get real time updates directly on you device, subscribe now.