ಶಾರ್ಜಾ: ಬಹುಮಹಡಿ ಕಟ್ಟಡದಿಂದ ಜಿಗಿದು ಕೇರಳಿಗ ಉದ್ಯಮಿ ಆತ್ಮಹತ್ಯೆ

ಕೋವಿಡ್ ಲಾಕ್‌ಡೌನ್‌ನಿಂದ ಉದ್ಯಮ ಕ್ಷೇತ್ರದಲ್ಲಿ ಭಾರೀ ಮಾನಸಿಕ ಒತ್ತಡ ಅನುಭವಿಸುತ್ತಿದ್ದರು ಎನ್ನಲಾಗಿದೆ.

ಕರಾವಳಿ ಕರ್ನಾಟಕ ವರದಿ
ಶಾರ್ಜಾ: ಬಹುಮಹಡಿ ಕಟ್ಟಡವೊಂದರಿಂದ ಜಿಗಿದು ಕೇರಳದ ಉದ್ಯಮಿ ಅಜಿತ್ ತಯ್ಯಿಲ್ ಎಂಬವರು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ.

ಬಹುಮಹಡಿ ಕಟ್ಟಡಗಳು, ಸುಪರ್ ಮಾರ್ಕೆಟ್ ಗಳಿಗೆ ಅಗತ್ಯವಾದ ಮೆಟಲ್ ಫ್ರೇಮ್ ಉತ್ಪಾದಕ ಸ್ಪೇಸ್ ಸೊಲ್ಯುಶನ್ಸ್ ಇಂಟರ್ ನ್ಯಾಷನಲ್ ಗ್ರೂಪ್ ಹಾಗೂ ಕೆಪಿಎಲ್ ದುಬೈ ಟಿ-20 ತಂಡದ ಮಾಜಿ ನಿರ್ದೇಶಕರಾಗಿ ಖ್ಯಾತಿ ಹೊಂದಿದ್ದ ಅಜಿತ್ ಅವರು ಸೋಮವಾರ ಬೆಳಿಗ್ಗೆ ಆತ್ಮಹತ್ಯೆಗೈದಿದ್ದು, ಬುಹೈರಾಹ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪತ್ನಿ, ಇಬ್ಬರು ಮಕ್ಕಳನ್ನು ಅಜಿತ್ ಅಗಲಿದ್ದಾರೆ.

ಕೇರಳದ ಇನ್ನೋರ್ವ ಖ್ಯಾತ ಉದ್ಯಮಿ ಜಾಯ್ ಅರಕ್ಕಲ್ ಅವರು ಕೂಡ ಇತ್ತೀಚೆಗೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೈದ ಘಟನೆಯನ್ನು ಈ ಘಟನೆ ಮತ್ತೆ ನೆನಪಿಸಿದೆ.

ಕೋವಿಡ್ ಲಾಕ್‌ಡೌನ್‌ನಿಂದ ಉದ್ಯಮ ಕ್ಷೇತ್ರದಲ್ಲಿ ಭಾರೀ ಮಾನಸಿಕ ಒತ್ತಡ ಅನುಭವಿಸುತ್ತಿದ್ದರು ಎನ್ನಲಾಗಿದೆ.

ಅಜಿತ್ ಅವರ ಪುತ್ರ ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪುತ್ರಿ ಶಾರ್ಜಾದಲ್ಲಿ ಶಿಕ್ಷಣ ಪಡೆದಿದ್ದು, ಉದ್ಯಮಿಯ ಆತ್ಮಹತ್ಯೆಯ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

Get real time updates directly on you device, subscribe now.