ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಆರೋಪಿ ನಿರಂಜನ ಭಟ್ಗೆ 15ದಿನ ಜಾಮೀನು
ಈತನ ತಂದೆ, ಪ್ರಕರಣದ ಸಾಕ್ಷನಾಶ ಆರೋಪಿ ಶ್ರೀನಿವಾಸ ಭಟ್ ಅನಾರೋಗ್ಯದಿಂದ ಜೂ.22ರಂದು ಮೃತಪಟ್ಟಿದ್ದು, ನಿರಂಜನ ಏಕೈಕ ಪುತ್ರ ಎಂಬ ನೆಲೆಯಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು.
ಕರಾವಳಿ ಕರ್ನಾಟಕ ವರದಿ
ಉಡುಪಿ: ಉಡುಪಿಯ ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನಂದಳಿಕೆ ನಿರಂಜನ ಭಟ್ಗೆ ಹದಿನೈದು ದಿನಗಳ ಜಾಮೀನು ಉಡುಪಿ ನ್ಯಾಯಾಲಯ ನೀಡಿದೆ.
ಈತನ ತಂದೆ, ಪ್ರಕರಣದ ಸಾಕ್ಷನಾಶ ಆರೋಪಿ ಶ್ರೀನಿವಾಸ ಭಟ್ ಅನಾರೋಗ್ಯದಿಂದ ಜೂ.22ರಂದು ಮೃತಪಟ್ಟಿದ್ದು, ನಿರಂಜನ ಏಕೈಕ ಪುತ್ರ ಎಂಬ ನೆಲೆಯಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು.
ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ನಿರಂಜನ ಈಗ ಜಾಮೀನಿನ ಮೇಲೆ ಜೂ.25ರಂದು ಬಿಡುಗಡೆಯಾಗಲಿದ್ದಾನೆ ಎನ್ನಲಾಗಿದೆ. ಜಾಮೀನು ಷರತ್ತಿನಲ್ಲಿ ಐದು ಲಕ್ಷ ರೂ. ಮೊತ್ತದ ಬಾಂಡ್ ನೀಡಲು ಮತ್ತು ಜು.7ರಂದು ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಲು ಕೋರ್ಟ್ ಸೂಚಿಸಿದೆ.
ಇಂದ್ರಾಳಿಯ ಮನೆಯಲ್ಲಿ ಉದ್ಯಮಿ ಭಾಸ್ಕರ ಶೆಟ್ಟಿಯನ್ನು ಅವರ ಪತ್ನಿ ಮತ್ತು ಪುತ್ರನೊಂದಿಗೆ ಸೇರಿ ನಿರಂಜನ್ ಭಟ್ ಕೊಲೆಗೈದು ಸುಟ್ಟು ಹಾಕಿದ್ದಾನೆ ಎಂದು ಪೊಲೀಸ್ ದೂರು ದಾಖಲಾಗಿತ್ತು.