ಕುಂಬಳೆ: 4ಕೆಜಿ ಗಾಂಜಾ ವಶ, ಆರೋಪಿ ಬಂಧನ

ಕರಾವಳಿ ಕರ್ನಾಟಕ ವರದಿ
ಮಂಜೇಶ್ವರ: ಕಾಮಗಾರಿ ನಡೆಯುತ್ತಿದ್ದ ಮನೆಯೊಂದರಲ್ಲಿ ನಾಲ್ಕು ಕೆಜಿ ಗಾಂಜಾ ಬಚ್ಚಿಟ್ಟಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಬಂದಿಯೋಡು ಅಡ್ಕದ ಬಾಡಿಗೆ ಕ್ವಾಟ್ರರ್ಸ್ ನಿವಾಸಿ ಕುಕ್ಕಾರು ಮೊಹ್ಮದ್ ಬಾತಿಷಾ(36) ಆರೋಪಿ.

ಕುಂಬಳೆ ಎಸ್ಸೈ ಸಂತೋಷ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು.

Get real time updates directly on you device, subscribe now.