ಕುವೈಟ್ ಕಾರ್ಮಿಕ ಮಸೂದೆ: 8ಲಕ್ಷ ಭಾರತೀಯರ ಉದ್ಯೋಗಕ್ಕೆ ಸಂಚಕಾರ ಸಾಧ್ಯತೆ

ಈ ಕುರಿತ ಬೆಳವಣಿಗೆಗಳನ್ನು ಕುವೈಟ್ ಭಾರತೀಯ ರಾಯಭಾರ ಕಚೇರಿ ಗಮನಿಸುತ್ತಿದೆ. ಇದುವರೆಗೆ ಭಾರತ ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಕುವೈಟ್‌ನಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಾಶಸ್ತ್ಯ ನೀಡಬೇಕು ಎಂಬ ಒತ್ತಾಯ ಕಳೆದ ಎರಡು ವರ್ಷಗಳಿಂದ ಇದೆ.

ಕರಾವಳಿ ಕರ್ನಾಟಕ ವರದಿ
ಕುವೈಟ್: ದೇಶದ ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಮತ್ತು ಸಂಸದೀಯ ಸಮಿತಿಯು  ಭಾರತೀಯ ಉದ್ಯೋಗಿಗಳನ್ನು ಕಡಿಮೆ ಮಾಡುವ ಸಂಬಂಧ ಸಿದ್ದಪಡಿಸಿರುವ ಕರಡು ಮಸೂದೆಯನ್ನು ಸಂವಿಧಾನಾತ್ಮಕ ಎಂದು ಪರಿಗಣಿಸಿರುವುದು ಭಾರತೀಯರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಈ ಕಾನೂನು ಜಾರಿಯಾದಲ್ಲಿ ಕುವೈಟ್‌ನಲ್ಲಿರುವ 8ಲಕ್ಷ ಭಾರತೀಯರ ಉದ್ಯೋಗಕ್ಕೆ ಸಂಚಕಾರ ಬರುವುದು ಖಚಿತ ಎನ್ನಲಾಗಿದೆ.

ಈ ಮಸೂದೆ ಪ್ರಕಾರ ಕುವೈಟ್‌ನಲ್ಲಿರುವ ಭಾರತೀಯರ ಸಂಖ್ಯೆಯನ್ನು ದೇಶದ ಒಟ್ಟು ಜನ ಸಂಖ್ಯೆಯ ಶೇಕಡಾ15ಕ್ಕೆ ಇಳಿಸಲಾಗುವುದು. ಪ್ರಸ್ತುತ ಕುವೈಟ್‌ನಲ್ಲಿ 14ಲಕ್ಷ ಭಾರತೀಯರಿದ್ದು, ಈ ಲೆಕ್ಕಾಚಾರದ ಪ್ರಕಾರ 8ಲಕ್ಷ ಲಕ್ಷ ಮಂದಿಯ ಉದ್ಯೋಗಕ್ಕೆ ಹೊಡೆತ ಬೀಳಲಿದೆ.

ಭಾರತದೊಂದಿಗೆ ಇತರ ವಿದೇಶಿ ಉದ್ಯೋಗಿಗಳನ್ನು ಕೂಡ ಕಡಿಮೆ ಮಾಡಲು ಕುವೈಟ್ ನಿರ್ಧರಿಸಿದೆ.

ಕುವೈಟ್‌ನಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಾಶಸ್ತ್ಯ ನೀಡಬೇಕು ಎಂಬ ಒತ್ತಾಯ ಕಳೆದ ಎರಡು ವರ್ಷಗಳಿಂದ ಇದೆ. ಹಿಂದೆ ಕೂಡಾ ಇಂಥ ಪ್ರಯತ್ನಗಳು ನಡೆದಿದ್ದವು. ಈ ಬಾರಿ ಉದ್ದೇಶಿತ ಮಸೂದೆಯನ್ನು ಸಂವಿಧಾನಾತ್ಮಕವಾಗಿ ಪರಿಗಣಿಸಿರುವುದರಿಂದ ಭಾರತೀಯರು ತೀವೃ ಆತಂಕದಲ್ಲಿದ್ದಾರೆ.

ಈ ಕುರಿತ ಬೆಳವಣಿಗೆಗಳನ್ನು ಕುವೈಟ್ ಭಾರತೀಯ ರಾಯಭಾರ ಕಚೇರಿ ಗಮನಿಸುತ್ತಿದೆ. ಇದುವರೆಗೆ ಭಾರತ ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Get real time updates directly on you device, subscribe now.