ಗಂಗೊಳ್ಳಿ: ಮುಂಜಾನೆ ಬೆಂಕಿ ಆಕಸ್ಮಿಕ, ಎರಡು ಅಂಗಡಿ ಬೆಂಕಿಗಾಹುತಿ
ಸತತ ಮೂರು ಗಂಟೆಗೂ ಅಧಿಕ ಸಮಯ ಕಾರ್ಯಾಚರಣೆ ಬಳಿಕ ಬೆಂಕಿ ಆರಿಸಲಾಯಿತು.
ಕರಾವಳಿ ಕರ್ನಾಟಕ ವರದಿ
ಗಂಗೊಳ್ಳಿ: ಮೇಲ್ ಗಂಗೊಳ್ಳಿಯಲ್ಲಿ ಬೆಳಗಿನ ಜಾವ ಸಂಭವಿಸಿದ ಆಕಸ್ಮಿಕದಲ್ಲಿ ಎರಡು ಅಂಗಡಿಗಳು ಸುಟ್ಟು ಹೋಗಿವೆ.
ದಿನೇಶ್ ನಾಯಕ್ ಮತ್ತು ಸಹೋದರ ಪದ್ಮನಾಭ ನಾಯಕ್ ಎಂಬವರ ಐಸ್ ಕ್ರೀಂ ಅಂಗಡಿ ಮತ್ತು ದಿನಸಿ ಅಂಗಡಿ ಬೆಂಕಿಗೆ ಪೂರ್ಣ ಸುಟ್ಟುಹೋಗಿವೆ.
ಕುಂದಾಪುರ ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಬೆಂಕಿ ಆರಿಸಲು ಶ್ರಮಿಸಿದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಸತತ ಮೂರು ಗಂಟೆಗೂ ಅಧಿಕ ಸಮಯ ಕಾರ್ಯಾಚರಣೆ ಬಳಿಕ ಬೆಂಕಿ ಆರಿಸಲಾಯಿತು.
ಗಂಗೊಳ್ಳಿ ಎಸ್ಸೈ ಭೀಮಾಶಂಕರ್, ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.