ಮಲ್ಪೆ: ಯುವಕನ ಕಗ್ಗೊಲೆ

ಹತ್ಯೆ ಪ್ರಕರಣ ಒಂದರ ಆರೋಪಿಯ ಸಹಚರರಿಂದ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಗರದಲ್ಲಿ ಯುವಕನೋರ್ವನನ್ನು ಕೊಲೆಗೈದಿರುವ ಘಟನೆ ರಾತ್ರಿ ನಡೆದಿದೆ.

ಯೋಗಿಶ್ ಕೊಲೆಯಾಗಿದ್ದು, ಹತ್ಯೆ ಪ್ರಕರಣ ಒಂದರ ಆರೋಪಿಯ ಸಹಚರರಿಂದ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.

ಕ್ಷುಲ್ಲಕ ಕಾರಣಕ್ಕಾಗಿ ಯೋಗಿಶ್ ಮನೆ ಮುಂದೆ ಜಗಳ ನಡೆದಿದ್ದು, ಕೊಲೆಗೈಯಲಾಗಿದೆ ಎನ್ನಲಾಗಿದೆ.

ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಲ್ಪೆ ಠಾಣಾಧಿಕಾರಿ ತಿಮ್ಮೇಶ್ ಭೇಟಿ ನೀಡಿ ಪರಿಶೀಲಿಸಿದ್ದು, ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.