ಭಟ್ಕಳ: ಯುಎಇಯಲ್ಲಿ ಲಾಕ್‌ಡೌನ್ ಸಂಕಷ್ಟದಲ್ಲಿದ್ದ 178ಭಟ್ಕಳಿಗರನ್ನು ಕರೆತಂದ ಚಾರ್ಟೆಡ್ ವಿಮಾನ

ದುಬೈಯ ಪ್ರಸಿದ್ಧ ಉದ್ಯಮಿ ಅತೀಕ್-ಉರ್-ರೆಹಮಾನ್ ಮುನಿರಿ ಅವರು ಎರಡನೇ ಬಾರಿ ಚಾರ್ಟರ್ಡ್ ವಿಮಾನದ ಮೂಲಕ 178 ಜನರನ್ನು ಭಟ್ಕಳಕ್ಕೆ ಕಳಿಸುವಲ್ಲಿ ಯಶಸ್ವಿ.

ಐದು ಬಸ್‌ಗಳ ಮೂಲಕ ಪ್ರಯಾಣಿಕರನ್ನು ಭಟ್ಕಳಕ್ಕೆ ಕರೆತಂದು ಎಲ್ಲರನ್ನೂ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಭಟ್ಕಳ: ಯುಎಇಯಲ್ಲಿ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿದ್ದ ಭಟ್ಕಳ ಪರಿಸರದ 178 ಮಂದಿ ಸ್ಪೈಸ್ ಜೆಟ್ ಚಾರ್ಟೆಡ್ ವಿಮಾನದಲ್ಲಿ ಮಂಗಳವಾರ ರಾತ್ರಿ ಮಂಗಳೂರು ತಲುಪಿದ್ದು, ಬುಧವಾರ ಬಸ್ ಮೂಲಕ ಭಟ್ಕಳ ತಲುಪಿದ್ದಾರೆ.

ದುಬೈಯ ರಾಸ್-ಅಲ್ –ಖೈಮಾ ವಿಮಾನ ನಿಲ್ದಾಣದ ಮೂಲಕ ಸ್ಪೈಸ್ ಜೆಟ್ ಚಾರ್ಟೆಡ್ ವಿಮಾನವು ಮಂಗಳವಾರ ತಡರಾತ್ರಿ ಮಂಗಳೂರು ವಿಮಾನ ನಿಲ್ದಾಣ ತಲುಪಿತ್ತು.

ಭಟ್ಕಲ್ ಮುಸ್ಲಿಂ ಜಮಾಅತ್ ಮಂಗಳೂರಿನ ಪದಾಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ ಉಪಹಾರ ವ್ಯವಸ್ಥೆ ಮಾಡಿದ್ದರು. ಐದು ಬಸ್‌ಗಳ ಮೂಲಕ ಪ್ರಯಾಣಿಕರನ್ನು ಭಟ್ಕಳಕ್ಕೆ ಕರೆತಂದು  ಜಿಲ್ಲಾಡಳಿತದ ನಿರ್ದೇಶನ ಮತ್ತು ತಂಝೀಮ್ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಎಲ್ಲರನ್ನೂ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ.

103ಮಂದಿಯನ್ನು ಜಾಮಿಯಾಬಾದ್ ರಸ್ತೆಯಲ್ಲಿರುವ ಅಲಿ ಪಬ್ಲಿಕ್ ಶಾಲೆಯಲ್ಲಿ ಕ್ವಾರಂಟೈನ್ ಮಾಡಿದ್ದು, 75 ಜನರು ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ದುಬೈಯ ಪ್ರಸಿದ್ಧ ಉದ್ಯಮಿ, ಮಜ್ಲಿಸ್-ಇ-ಇಸ್ಲಾಹ್-ವ-ತಂಜೀಮ್ ಉಪಾಧ್ಯಕ್ಷ ಅತೀಕ್-ಉರ್-ರೆಹಮಾನ್ ಮುನಿರಿ ಅವರು ಎರಡನೇ ಬಾರಿ ಚಾರ್ಟರ್ಡ್ ವಿಮಾನದ ಮೂಲಕ  ಆರು ಮಕ್ಕಳು ಸೇರಿದಂತೆ 178 ಜನರನ್ನು ಭಟ್ಕಳಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Get real time updates directly on you device, subscribe now.