ಕುವೈಟ್ ಕಾರ್ಮಿಕ ಮಸೂದೆ: 50ಸಾವಿರ ಕನ್ನಡಿಗರಿಗೆ ಉದ್ಯೋಗ ನಷ್ಟ ಭೀತಿ

ಇದೀಗ ಮಸೂದೆಯ ತೂಗುಗತ್ತಿ ಈಗ ಎಲ್ಲರ ಮೇಲೆ ಬಿದ್ದಿದೆ. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಮುಂಬೈ, ಬೆಂಗಳೂರು ಮುಂತಾದ ಮಹಾನಗರಗಳಲ್ಲೂ ದುಡಿಯುವ ಅವಕಾಶ ಈಗಿಲ್ಲ. ಯುಎಇ ಸೇರಿದಂತೆ ಗಲ್ಫ್ ದೇಶಗಳಲ್ಲೂ ಭಾರತೀಯರಿಗೆ ಇನ್ನು ಮುಂದೆ ಉದ್ಯೋಗಕ್ಕೆ ಅವಕಾಶ ಕೋವಿಡ್ ಭೀತಿಯ ಕಾರಣ ಸಿಗುವುದು ಕಷ್ಟ.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ  ಜಿಲ್ಲೆಗಳ ಹೆಚ್ಚಿನ ಮಂದಿ ಕುವೈಟ್‌ನಲ್ಲಿದ್ದು, ಅಲ್ಲಿನ ಉದ್ಯೋಗ ಕಳೆದುಕೊಂಡರೆ ಕರಾವಳಿ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕುವೈಟ್ ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಮತ್ತು ಸಂಸದೀಯ ಸಮಿತಿ ವಿದೇಶಿ ವಲಸೆ ಮೀಸಲಾತಿ ಮಸೂದೆಗೆ ಅಂಗೀಕಾರ ನೀಡಿರುವುದರಿಂದ ಉದ್ಯೋಗ ಕಳೆದುಕೊಳ್ಳುವ ಲಕ್ಷಾಂತರ ಭಾರತೀಯರಲ್ಲಿ 50 ಸಾವಿರ ಮಂದಿ ಕನ್ನಡಿಗರಾಗಿದ್ದಾರೆ.

ಕುವೈಟ್ ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಮತ್ತು ಸಂಸದೀಯ ಸಮಿತಿ ಭಾರತೀಯ ಉದ್ಯೋಗಿಗಳನ್ನು ಕಡಿಮೆ ಮಾಡುವ ಸಂಬಂಧ ಸಿದ್ದಪಡಿಸಿರುವ ಕರಡು ಮಸೂದೆಯನ್ನು ಸಂವಿಧಾನಾತ್ಮಕ ಎಂದು ಪರಿಗಣಿಸಿರುವುದು ಇದೀಗ ಹೊಟ್ಟೆಪಾಡಿಗಾಗಿ ದಶಕಗಳಿಂದ ಗಲ್ಫ್ ದೇಶಗಳನ್ನು ಅದರಲ್ಲೂ ಕುವೈಟ್ ಆಶ್ರಯಿಸಿದ್ದ ಕರಾವಳಿ ಕರ್ನಾಟಕ ಭಾಗದ ಜನರಿಗೆ ಭಾರೀ ಆತಂಕಕ್ಕೆ ಕಾರಣವಾಗಿದೆ.

ಈ ಕುರಿತ ಬೆಳವಣಿಗೆಗಳನ್ನು ಕುವೈಟ್ ಭಾರತೀಯ ರಾಯಭಾರ ಕಚೇರಿ ಗಮನಿಸುತ್ತಿದೆ. ಇದುವರೆಗೆ ಭಾರತ ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.ಮಸೂದೆ ಪ್ರಕಾರ ಕುವೈಟ್‌ನಲ್ಲಿರುವ ಭಾರತೀಯರ ಸಂಖ್ಯೆಯನ್ನು ದೇಶದ ಒಟ್ಟು ಜನ ಸಂಖ್ಯೆಯ ಶೇಕಡಾ15ಕ್ಕೆ ಇಳಿಸಲಾಗುವುದು. ಪ್ರಸ್ತುತ ಕುವೈಟ್‌ನಲ್ಲಿ 14ಲಕ್ಷ ಭಾರತೀಯರಿದ್ದು, ಈ ಲೆಕ್ಕಾಚಾರದ ಪ್ರಕಾರ 8ಲಕ್ಷ ಮಂದಿಯ ಉದ್ಯೋಗಕ್ಕೆ ಹೊಡೆತ ಬೀಳಲಿದೆ.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ  ಜಿಲ್ಲೆಗಳ ಹೆಚ್ಚಿನ ಮಂದಿ ಕುವೈಟ್‌ನಲ್ಲಿದ್ದು, ಅಲ್ಲಿನ ಉದ್ಯೋಗ ಕಳೆದುಕೊಂಡರೆ ಕರಾವಳಿ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ.

ಹಿಂದೆ ಮುಂಬೈಯನ್ನು ಬದುಕಿಗೆ ಆಶ್ರಯಿಸಿದ್ದ ಕರಾವಳಿಯ ಕುಟುಂಬಗಳು ಆ ಬಳಿಕ ಗಲ್ಫ್ ದೇಶಗಳನ್ನೇ ನೆಚ್ಚಿಕೊಂಡಿದ್ದವರು. ಉದ್ಯೋಗ ಭದ್ರತೆ ಮತ್ತು ಉತ್ತಮ ಸಂಬಳ, ಸೌಹಾರ್ದದ ವಾತಾವರಣದಿಂದ ಕುವೈಟ್‌ನಲ್ಲಿ ಕರಾವಳಿಯ ಬಹುತೇಕ ಜನರು ಕೆಲಸ ಮಾಡುತ್ತಿದ್ದರು. ಕಡಿಮೆ ವಿದ್ಯಾರ್ಹತೆ, ಉನ್ನತ ವಿದ್ಯಾರ್ಹತೆ ಎಲ್ಲರಿಗೂ ಕುವೈಟ್ ಉನ್ನತ ವೇತನವನ್ನೇ ನೀಡುತ್ತಿತ್ತು.

ಇದೀಗ ಮಸೂದೆಯ ತೂಗುಗತ್ತಿ ಈಗ ಎಲ್ಲರ ಮೇಲೆ ಬಿದ್ದಿದೆ. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಮುಂಬೈ, ಬೆಂಗಳೂರು ಮುಂತಾದ ಮಹಾನಗರಗಳಲ್ಲೂ ದುಡಿಯುವ ಅವಕಾಶ ಈಗಿಲ್ಲ. ಯುಎಇ ಸೇರಿದಂತೆ ಗಲ್ಫ್ ದೇಶಗಳಲ್ಲೂ ಭಾರತೀಯರಿಗೆ ಇನ್ನು ಮುಂದೆ ಉದ್ಯೋಗಕ್ಕೆ ಅವಕಾಶ ಕೋವಿಡ್ ಭೀತಿಯ ಕಾರಣ ಸಿಗುವುದು ಕಷ್ಟ.

ಒಂದು ಅಥವಾ ಎರಡು ವರ್ಷದೊಳಗೆ ಹೊಸ ‍ನಿಯಮ ಕುವೈಟ್‌‌ನಲ್ಲಿ ಜಾರಿಗೆ ಬರಲಿದ್ದು, ಅಲ್ಲಿಯ ತನಕ ಕೂಡ ಭಾರತೀಯರನ್ನು ಉದ್ಯೋಗದಲ್ಲಿರಿಸಿಕೊಳ್ಳಲು ಅಲ್ಲಿಯ ಸಂಸ್ಥೆಗಳು ಮನಸು ಮಾಡುತ್ತಿಲ್ಲ. ಕೋವಿಡ್ ಲಾಕ್ ಡೌನ್, ಕರ್ಪ್ಯೂನಿಂದಾಗಿ ಅಲ್ಲಿ ಕೂಡ ಆರ್ಥಿಕತೆ ಕುಸಿಯುತ್ತಿದೆ. ತೈಲ ಬೆಲೆಗಳಲ್ಲಿ ಇಳಿಕೆಯಿಂದ ಕುವೈಟ್ ದೇಶದ ಆರ್ಥಿಕತೆಯೂ ಹದಗೆಡುತ್ತಲೇ ಇದೆ.

ಇಂಥ ಪರಿಸ್ಥಿತಿಯಲ್ಲಿ ಕುವೈಟ್‌ನಲ್ಲಿ ಉದ್ಯೋಗ ಕಳೆದುಕೊಂಡು ಕನ್ನಡಿಗರು ಅದರಲ್ಲೂ ಕರಾವಳಿ ಕನ್ನಡಿಗರು ಊರಿಗೆ ಬಂದರೆ ಹೇಗೆ ಬದುಕುವುದು ಎಂಬ ಚಿಂತೆಯ ಕಾರ್ಮೋಡ ಅವರ ಮನೆಮಂದಿಯಲ್ಲಿ ಕವಿದಿದೆ.

Get real time updates directly on you device, subscribe now.