ಉಡುಪಿ: ಯೋಗೀಶ್ ಪೂಜಾರಿ ಕೊಲೆ ಪ್ರಕರಣ, ಇನ್ನೊಬ್ಬ ಆರೋಪಿ ಸೆರೆ

ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿ ಗಿರೀಶ್‌ಗಾಗಿ ಪೊಲೀಸ್ ಶೋಧ ಮುಂದುವರೆದಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರ ನಿವಾಸಿ ಯೋಗಿಶ್ ಪೂಜಾರಿ ಕೊಲೆಗೆ ಸಂಬಂಧಿಸಿ ಇನ್ನೊಬ್ಬ ಆರೋಪಿಯನ್ನು ಬಾಗಲಕೋಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬೈಲಕೆರೆಯ ಅನುಪ್ ಕುಂದರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ ಪಡಿಸಿಕೊಂಡಿದ್ದಾರೆ. ಈತನನ್ನು ಇಂದು ನ್ಯಾಯಾಧೀಶರ ನಿವಾಸದ ಎದುರು ಹಾಜರು ಪಡಿಸುವ ಸಾಧ್ಯತೆ ಇದೆ.

ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿ ಗಿರೀಶ್‌ಗಾಗಿ ಪೊಲೀಸ್ ಶೋಧ ಮುಂದುವರೆದಿದೆ.

Get real time updates directly on you device, subscribe now.