‘ಲಾಕ್‌ಡೌನ್‌ಗೆ ವಯಕ್ತಿಕವಾಗಿ ನನ್ನ ವಿರೋಧವಿದೆ, ಲಾಕ್‌ಡೌನ್ ಬಗ್ಗೆ ಭ್ರಮೆ ಬೇಡ’: ಯಡಿಯೂರಪ್ಪ

ಲಾಕ್‌ಡೌನ್‌ನಿಂದ ಎಲ್ಲ ಸರಿಯಾಗುತ್ತೆ ಎಂಬ ಭ್ರಮೆ ಬೇಡ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಲಾಕ್‌ಡೌನ್‌ಗೆ ಸಾರ್ವಜನಿಕರ ಒತ್ತಡ ಹೆಚ್ಚುತ್ತಿದೆ ಎಂಬ ವಿಷಯವನ್ನು ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರರು ವಿಡೀಯೊ ಕಾನ್ಫರೆನ್ಸ್ ಸಂದರ್ಭ ಸಿಎಂ ಗಮನಕ್ಕೆ ತಂದ ವೇಳೆ, ಲಾಕ್‌ಡೌನ್‌ನಿಂದ ಎಲ್ಲ ಸರಿಯಾಗುತ್ತೆ ಎಂಬ ಭ್ರಮೆ ಬೇಡ, ಲಾಕ್‌ಡೌನ್‌ಗೆ ನನ್ನ ವಯಕ್ತಿಕ ವಿರೋಧವಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿರುವುದು ವರದಿಯಾಗಿದೆ.

ಸೋಮವಾರ ಬೆಳಿಗ್ಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್, ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡೀಯೊ ಸಂವಾದ ಸಂದರ್ಭ ಸಿಎಂ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಒಂದು ವಾರ ಲಾಕ್‌ಡೌನ್ ಮಾಡುವಂತೆ ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಒಂದು ವಾರ ಲಾಕ್‌ಡೌನ್ ಮಾಡುವಂತೆ ಸಿಎಂಗೆ ಹೇಳಿದ್ದರು.

ಈ ಸಂದರ್ಭ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ.

Get real time updates directly on you device, subscribe now.