ಉಡುಪಿ: 14ದಿನ ಗಡಿ ಸೀಲ್ ಡೌನ್

ಬುಧವಾರ ರಾತ್ರಿ 8ಗಂಟೆ ತನಕ ಜಿಲ್ಲೆಯ ಒಳಗೆ ಬರುವವರು ಮತ್ತು ಹೋಗುವವರಿಗೆ ಅವಕಾಶ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಗುರುವಾರದಿಂದ ಎರಡು ವಾರ ಜಿಲ್ಲೆಯ ಎಲ್ಲ ಗಡಿಗಳನ್ನು ಸೀಲ್ ಡೌನ್ ಮಾಡಲು ಜಿಲ್ಲಾಧಿಕಾರಿ ಜಗದೀಶ್ ಅವರು ಕರೆದ ಜನಪ್ರತಿನಿಧಿಗಳ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸೂಚನೆ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗಿದೆ.

ಬುಧವಾರ ರಾತ್ರಿ 8ಗಂಟೆ ತನಕ ಜಿಲ್ಲೆಯ ಒಳಗೆ ಬರುವವರು ಮತ್ತು ಹೋಗುವವರಿಗೆ ಅವಕಾಶ ನೀಡಲಾಗಿದ್ದು, ಆ ಬಳಿಕ ಜಿಲ್ಲೆಯ ಗಡಿಗಳನ್ನು ಬಂದ್ ಮಾಡಲಾಗುತ್ತದೆ.

Get real time updates directly on you device, subscribe now.