ಬೆಳ್ತಂಗಡಿ: ಆಸ್ಪತ್ರೆ ಬೀಗ ಮುರಿದು ಕೊರೋನಾ ಸೋಂಕಿತ ಪತ್ನಿಯನ್ನು ಕರೆದೊಯ್ದ ಪತಿ!

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ: ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆರಿಯಾಗಿದ್ದ ಮಹಿಳೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟ ಸುದ್ದಿ ತಿಳಿಯುತ್ತಲೇ ಆಕೆಯ ಪತಿ ಆಸ್ಪತ್ರೆಯ ಬೀಗ ಮುರಿದು ಪತ್ನಿ ಮತ್ತು ಮಗುವಿನೊಂದಿಗೆ ಪರಾರಿಯಾದ ಸಂಗತಿ ವರದಿಯಾಗಿದೆ.

ನಾವೂರು ಗ್ರಾಮದ ಮಹಿಳೆ ಹೆರಿಗಾಗಿ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ರಾತ್ರಿ ಅವರಿಗೆ ಹೆರಿಗೆ ಆಗಿತ್ತು. ಗುರುವಾರ ಸಂಜೆ ಕೊರೋನಾ ಪರೀಕ್ಷೆಯ ಫಲಿತಾಂಶದ ಬಗ್ಗೆ ಮಹಿಳೆಗೆ ಮಾಹಿತಿ ದೊರಕಿತ್ತು.

ಈ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಕಾರಿನಲ್ಲಿ ಧಾವಿಸಿ ಬಂದ ಪತಿ, ಆಸ್ಪತ್ರೆ ಗೇಟ್ ಬೀಗ ಮುರಿದು ತಾಯಿ-ಮಗುವನ್ನು ಕರೆದುಕೊಂಡು ಹೋಗಿದ್ದಾನೆ.

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Get real time updates directly on you device, subscribe now.