ಉಡುಪಿ: ಬಾವಿಯಿಂದ ಪಂಪ್‌ಸೆಟ್ ಎತ್ತುವಾಗ ವಿದ್ಯುದಾಘಾತದಿಂದ ಬಾಲಕ ಮೃತ್ಯು

ಪಂಪ್ ಬಾವಿಯಿಂದ ಮೇಲೆತ್ತುವ ಸಂದರ್ಭ ನೆರವಾಗಿದ್ದ.

ಮಿಲಾಗ್ರಿಸ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಗೌತಮನ ನಿಧನಕ್ಕೆ ಪರಿಸರದ ಜನ ಗಾಢ ಶೋಕ ವ್ಯಕ್ತಪಡಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ನೆರೆಮನೆಯ ಬಾವಿಯಿಂದ ಪಂಪ್‌ಸೆಟ್ ಎತ್ತುವ ಸಂದರ್ಭ ವಿದ್ಯುದಾಘಾತಕ್ಕೆ ಒಳಗಾದ ಹದಿನೈದರ ಹರಯದ ಬಾಲಕ ಸಾವಪ್ಪಿದ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಲಕ್ಷ್ಮೀನಗರ ನಿವಾಸಿ ಮಂಜುನಾಥ ಮತ್ತು ಶಕುಂತಲಾ ನಾಯಕ್ ಪುತ್ರ ಗೌತಮ ಮೃತಪಟ್ಟಿದ್ದಾನೆ.

ಗೌತಮ ಯಾವಾಗಲೂ ಆಟವಾಡಲು ಪಕ್ಕದ ಮನೆಗೆ ಹೋಗುತ್ತಿದ್ದು, ಮನೆಯವರು ಪಂಪ್ ಬಾವಿಯಿಂದ ಮೇಲೆತ್ತುವ ಸಂದರ್ಭ ನೆರವಾಗಿದ್ದ ಎನ್ನಲಾಗಿದೆ. ಈ ಸಂದರ್ಭ ವಿದ್ಯುದಾಘಾತಕ್ಕೆ ಒಳಗಾಗಿ ಸಾವಪ್ಪಿದ್ದಾನೆ.ಮಿಲಾಗ್ರಿಸ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಗೌತಮನ ನಿಧನಕ್ಕೆ ಪರಿಸರದ ಜನ ಗಾಢ ಶೋಕ ವ್ಯಕ್ತಪಡಿಸಿದ್ದಾರೆ.

ಮಿಲಾಗ್ರಿಸ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಗೌತಮನ ನಿಧನಕ್ಕೆ ಪರಿಸರದ ಜನ ಗಾಢ ಶೋಕ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.